ಬ್ಲಾಕ್ & ವೈಟ್ ಚಿತ್ರಗಳ ಕಾಲದ ಕೊಂಡಿಯಂತಿದ್ದ ನಟಿ ಹೇಮಲತಾ. ಗುಬ್ಬಿ ವೀರಣ್ಣ ಅವರ ಕೊನೆಯ ಮಗಳು. ಚಿಕ್ಕಬಳ್ಳಾಪುರದಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಹೃದಯಾಘಾತಕ್ಕೀಡಾಗಿದ್ದ ಹೇಮಲತಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೇಮಲತಾ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದಳು.
ಡಾ. ರಾಜ್ ಜೊತೆ ಎಮ್ಮೆ ತಮ್ಮಣ್ಣ, ಕಲ್ಯಾಣ್ ಕುಮಾರ್ ಜೊತೆ ಕಲಾವತಿ ಸೇರಿದಂತೆ ನಟಿಸಿದ್ದು ಕೆಲವೇ ಚಿತ್ರಗಳು. ಅತ್ಯುತ್ತಮ ನೃತ್ಯಗಾರ್ತಿಯಾಗಿದ್ದರು ಹೇಮಲತಾ. ಹೇಮಲತಾ ಅವರ ಆಸೆಯಂತೆ ಅವರ ದೇಹವನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ದಾನ ಮಾಡಲಾಗಿದೆ.