` ರಾಜಕುಮಾರಿಯ ಜೋಜೋ ಹಾಡು.. ಕೇಳಿದವರೆಲ್ಲ ಹಾಡಿದ್ರು ಲಾಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಜಕುಮಾರಿಯ ಜೋಜೋ ಹಾಡು.. ಕೇಳಿದವರೆಲ್ಲ ಹಾಡಿದ್ರು ಲಾಲಿ..
Vikrant Rona Song Image

ವಿಕ್ರಾಂತ್ ರೋಣ ಚಿತ್ರದ ಒಂದು ಹಾಡು ಈಗಾಗಲೇ ಸದ್ದು..ಸುದ್ದಿ..ಮಾಡಿ ಪಡ್ಡೆ ಹೈಕಳ ಡೇ&ನೈಟ್ ಸಾಂಗ್ ಆಗಿದೆ. ರಕ್ಕಮ್ಮ ಹಾಡಿನ ಮೂಲಕ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಜನೀಶ್ ಲೋಕನಾಥ್.. ಈಗ ಮಲಗೋಕೆ.. ಮಕ್ಕಳನ್ನು ಮಲಗಿಸೋಕೆ.. ಚೆಂದದ ಲಾಲಿ ಹಾಡು ಕೊಟ್ಟಿದ್ದಾರೆ. ರಾಜಕುಮಾರಿ ಹಾಡು..

ಮಕ್ಕಳನ್ನು ಪ್ರೀತಿಸುವ ಅದರಲ್ಲೂ ಹೆಣ್ಣು ಮಕ್ಕಳ ಅಪ್ಪಂದಿರಿಗೆ ಈ ಹಾಡು ಇನ್ನೂ ಇನ್ನೂ ಇಷ್ಟವಾಗೋದ್ರಲ್ಲಿ ಅನುಮಾನವಿಲ್ಲ. ಕಿಚ್ಚ ಸುದೀಪ್ ಅವರಿಗೆ ಈ ಹಾಡು ಇಷ್ಟವಾಗಿರೋದು ಅದೇ ಕಾರಣಕ್ಕೆ. ಅವರ ಮನೆಯ ರಾಜಕುಮಾರಿಗಾಗಿಯೇ ಬರೆದಂತಿದೆ ಈ ಹಾಡು.

ಅನೂಪ್ ಭಂಡಾರಿ ಅವರೇ ಈ ಹಾಡಿಗೂ ಸಾಹಿತ್ಯ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್ ರಾಜಕುಮಾರಿ ಹಾಡಿಗೆ ಮಾರ್ದವತೆ ತುಂಬಿದ್ದಾರೆ. ಕೇಳುವ ಪ್ರೇಕ್ಷಕರಿಗೂ ಬೇರೆಯದೇ ಫೀಲ್ ಕೊಟ್ಟಿದೆ ವಿಕ್ರಾಂತ್  ರೋಣನ ಈ ಹಾಡು.