` ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ
Rakshit Shetty

777 ಚಾರ್ಲಿ. ಈಗ ಇಡೀ ದೇಶದಲ್ಲಿ ಸುದ್ದಿ ಮಾಡ್ತಿರೋ ಸಿನಿಮಾ. ಬಾಕ್ಸಾಫೀಸಿನಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಾ 4ನೇ ವಾರದಲ್ಲೂ ಸಖತ್ತಾಗಿ ಕ್ಲಿಕ್ ಆಗಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ನಿಧಾನಕ್ಕೆ ಪಿಕಪ್ ಆದ 777 ಚಾರ್ಲಿ, ಅಲ್ಲಿಯ ಪ್ರೇಕ್ಷಕರಿಗೂ ಇಷ್ಟವಾಗಿದ್ದು ವಿಶೇಷ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ತಮ್ಮ ಅವನೇ ಶ್ರೀಮನ್ನಾರಯಣ ಚಿತ್ರವನ್ನ ನೆನಪಿಸಿಕೊಂಡಿದ್ದಾರೆ.

ನಾನು ಈಗಲೂ ಅವನೇ ಶ್ರೀಮನ್ನಾರಾಯಣ ಸೋತಿತು ಎಂದು ಒಪ್ಪಿಕೊಳ್ಳಲ್ಲ. ಅದೊಂದು ಕೆಟ್ಟ ಬಿಸಿನೆಸ್. 777 ಚಾರ್ಲಿ ರಿಲೀಸ್ ವೇಳೆ ಮತ್ತೆ ನಾವೇನಾದರೂ ಅದೇ ರೀತಿ ಮಾಡಿದ್ದರೆ ನನಗೆ ಬರುತ್ತಿದ್ದ ಲಾಭದಲ್ಲಿ ಬಹುತೇಕ ಕಡಿಮೆಯಾಗುತ್ತಿತ್ತು. ನನಗೆ ಅವನೇ ಶ್ರೀಮನ್ನಾರಾಯಣ ದೊಡ್ಡ ಪಾಠ. ಸಿನಿಮಾ ಮೇಕಿಂಗ್, ಬಿಸಿನೆಸ್, ಲೈಫ್.. ಎಲ್ಲವನ್ನೂ ಕಲಿಸಿದ ಎಂದಿದ್ದಾರೆ ರಕ್ಷಿತ್ ಶೆಟ್ಟಿ.