ನಟ ನಟಿಯರಿಗೆ ಏನಾದರೂ ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ಅಭಿಮಾನಿಗಳು ಚಡಪಡಿಸಿಬಿಡ್ತಾರೆ. ಅಭಿಮಾನಿಗಳ ಆತಂಕಕ್ಕೆ ಹಲವಾರು ಕಾರಣಗಳಿವೆ. ಶನಿವಾರವೂ ಹೀಗೆಯೇ ಆಗಿಬಿಡ್ತು.
ಕಾಮಿಡಿ ಸ್ಟಾರ್ ಚಿಕ್ಕಣ್ಣ ಆರೋಗ್ಯ ಏರುಪೇರಾಗಿದ್ಯಂತೆ. ಆಸ್ಪತ್ರೆಯಲ್ಲಿದ್ದಾರಂತೆ. ಸೀರಿಯಸ್ ಅಂತೆ.. ಇಂತಾದ್ದೊಂದು ಸುದ್ದಿ ಹರಿದಾಡಿದಾಗ ಚಿಕ್ಕಣ್ಣನವರ ಮೊಬೈಲ್ ರೆಸ್ಟ್ ಇಲ್ಲದೆ ರಿಂಗ್ ಆಗೋಕೆ ಶುರುವಾಯ್ತು. ಎಷ್ಟು ಜನರಿಗೆ ಅಂತ ಉತ್ತರಿಸಬಹುದು.. ಕೊನೆಗೆ ಸಾಧ್ಯವಾಗದೆ ಚಿಕ್ಕಣ್ಣನವರೇ ಪುಟ್ಟದೊಂದು ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ.
ಸದ್ಯಕ್ಕೆ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದ ಶೂಟಿಂಗಿನಲ್ಲಿದ್ದಾರೆ. ಉಮಾಪತಿ ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಜೊತೆ ರವಿಶಂಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಯಾರೂ ಟೆನ್ಷನ್ ಮಾಡ್ಕೋಬೇಡಿ.ನಾನು ಆರಾಮ್ ಆಗಿದ್ದೇನೆ. ಉಪಾಧ್ಯಕ್ಷ ಶೂಟಿಂಗಿನಲ್ಲಿದ್ದೇನೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಮಸ್ಕಾರ ಎಂದು ಕಾಮಿಡಿಯಾಗಿಯೇ ಹೇಳಿದ್ದಾರೆ ಚಿಕ್ಕಣ್ಣ.