ಚಿತ್ರದ ಹೀರೋ ತಾಳಗುಪ್ಪ ರಘು. ಆತ ಪ್ರತಿನಿತ್ಯ ಸಾಗರದಿಂದ ತಾಳಗುಪ್ಪಕ್ಕೆ ರೈಲಿಲ್ಲಿ ಓಡಾಡುತ್ತಿರುತ್ತಾನೆ. ಆತನಿಗೆ ವಿಂಡೋ ಸೀಟ್ ಎಂದರೆ ಇಷ್ಟ. ಯಾವಾಗಲೂ ವಿಂಡೋಸೀಟ್ ಇಷ್ಟಪಡುವ ಆತನ ಬಯಕೆಯೇ ಆತನಿಗೆ ಸಂಕಷ್ಟ ತಂದೊಡ್ಡುತ್ತದೆ. ಆತ ಅದನ್ನೆಲ್ಲ ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ.
ನೀವ್ ನೋಡ್ತಿದ್ದೀರಾ ಟಿವಿ 9. ನಾನು ಶೀತಲ್ ಶೆಟ್ಟಿ ಎನ್ನುತ್ತಿದ್ದ ಆಂಕರ್ ಶೀತಲ್ ಶೆಟ್ಟಿ, ಈಗ ನಿರ್ದೇಶಕಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಸಿನಿಮಾ ಇದು. ಒಂದು ವಿಂಡೋ ಸೀಟ್ ಇಟ್ಟುಕೊಂಡು ಏನು ಕಥೆ ಮಾಡಬಹುದಪ್ಪಾ ಎನ್ನುವವರಿಗೆ ಟ್ರೇಲರಿನಲ್ಲೇ ಝಲಕ್ ತೋರಿಸಿದ್ದಾರೆ.
ರಂಗಿತರಂಗ ನಿರೂಪ್ ಭಂಡಾರಿ ಹೀರೋ ಆಗಿರುವ ಚಿತ್ರವಿದು. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಇಬ್ಬರು ನಾಯಕಿಯರು. ಜುಲೈ 1ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ.