ದೇಶದಾದ್ಯಂತ ಭಾವುಕತೆಯ ಸಂಚಲನ ಸೃಷ್ಟಿಸಿದ ಸಿನಿಮಾ 777 ಚಾರ್ಲಿ. ಒಂದು ಸುದೀರ್ಘ ಗ್ಯಾಪ್ ನಂತರ ಬಂದ ರಕ್ಷಿತ್ ಶೆಟ್ಟಿ ಸಿನಿಮಾ ಬೊಂಬಾಟ್ ಪ್ರದರ್ಶನ ಕಾಣುತ್ತಿದೆ. ಸತತ 3ನೇ ವಾರದ ವೀಕೆಂಡ್‍ನಲ್ಲೂ 777 ಚಾರ್ಲಿ ಬೊಂಬಾಟ್. ಬಾಕ್ಸಾಫೀಸ್ ಮೂಲಗಳ ಪ್ರಕಾರ 777 ಚಾರ್ಲಿಯ ಗಳಿಕೆ 60 ಕೋಟಿ ದಾಟಿ ಮುನ್ನುಗ್ಗುತ್ತಿದೆ.
ಈ ಅವಧಿಯಲ್ಲಿ ಈ ಸಿನಿಮಾ ಯಶ್ ಅವರ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರದ ಬಾಕ್ಸಾಫೀಸ್ ದಾಖಲೆ ಬ್ರೇಕ್ ಮಾಡಿದೆ ಎಂಬ ಸುದ್ದಿ ಇದೆ. ಅಧಿಕೃತವಾಗಿಲ್ಲ, ಅಷ್ಟೆ. ದಾಖಲೆಗಳಿರೋದೇ ಮುರಿಯೋದಕ್ಕೆ. ಈಗ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಲಿಸ್ಟಿನಲ್ಲಿ 777 ಚಾರ್ಲಿ 5ನೇ ಸ್ಥಾನಕ್ಕೇರಿದೆ ಎನ್ನಲಾಗಿದೆ.
ಡೈರೆಕ್ಟರ್ ಕಿರಣ್ ರಾಜ್ ಅವರಿಗೆ ಇದು ಫಸ್ಟ್ ಮೂವಿ. ನಾಯಿಯನ್ನೇ ಹೀರೋ ಮಾಡಿಕೊಂಡು ಗೆದ್ದಿರುವ ರಕ್ಷಿತ್ ಶೆಟ್ಟಿ.. ಪ್ರೇಕ್ಷಕರ ಹೃದಯವನ್ನೂ.. ವಿರ್ಮಶಕರ ಮೆದುಳನ್ನೂ.. ಬಾಕ್ಸಾಫೀಸಿನ ಕೀಲಿಕೈಯನ್ನೂ ಏಕಕಾಲಕ್ಕೆ ಕದ್ದಿರೋದು 777 ಚಾರ್ಲಿಯ ವಿಶೇಷ.