ಪ್ರೇಮ ಬರಹ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಈಗ ತೆಲುಗು ಚಿತ್ರರಂಗ ಪ್ರವೇಶಕ್ಕೆ ಸಿದ್ಧರಾಗುತ್ತಿದ್ದಾರೆ. ಒನ್ಸ್ ಎಗೇನ್ ಈ ಚಿತ್ರಕ್ಕೂ ಅಪ್ಪನೇ ಸಾರಥಿ. ಐಶ್ವರ್ಯಾ ನಟಿಸುತ್ತಿರೋ ಮೊದಲ ತೆಲುಗು ಚಿತ್ರಕ್ಕೆ ಅರ್ಜುನ್ ಸರ್ಜಾ ಅವರೇ ನಿರ್ದೇಶಕ ಮತ್ತು ನಿರ್ಮಾಪಕ. ಇತ್ತೀಚೆಗೆ ಚಿತ್ರದ ಮುಹೂರ್ತವೂ ನೆರವೇರಿದ್ದು, ಪವನ್ ಕಲ್ಯಾಣ್ ಕ್ಲಾಪ್ ಮಾಡಿ ಸರ್ಜಾ ಮಗಳಿಗೆ ಶುಭ ಕೋರಿದ್ದಾರೆ.
ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಇದೊಂದು ರೋಡ್ ಜರ್ನಿ ಮೂವಿ. ಐಶ್ವರ್ಯಾಗೆ ಹೀರೋ ಆಗಿ ವಿಶ್ವಕ್ ಸೇನ್ ನಟಿಸುತ್ತಿದ್ದಾರೆ. ವಿಲನ್ ಆಗಿ ಜಗಪತಿ ಬಾಬು ನಟಿಸುತ್ತಿದ್ದಾರೆ