` ಅರ್ಜುನ್ ಜನ್ಯ-ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರ್ಜುನ್ ಜನ್ಯ-ಶಿವಣ್ಣ ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ?
Arjun Janya, Shivarajkumar

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶನದ ಸಾಹಸಕ್ಕೆ  ಕೈ ಹಾಕಿದ್ದಾರೆ ಹಾಗೂ ಆ ಚಿತ್ರಕ್ಕೆ ಶಿವಣ್ಣ ಹೀರೋ ಎನ್ನುವ ಸುದ್ದಿಯನ್ನು ಚಿತ್ರಲೋಕದಲ್ಲಿಯೇ ಓದಿದ್ದಿರಿ. ಈಗ ಆ ಚಿತ್ರದ ಅಪ್‍ಡೇಟ್ ಸಿಕ್ಕಿದೆ. ನಿರ್ಮಾಪಕರು ಯಾರು ಅನ್ನೋದು ಕೂಡಾ ಗೊತ್ತಾಗಿದೆ. ರಮೇಶ್ ರೆಡ್ಡಿ.

ನನ್ನ ನಿರ್ದೇಶನದ ಮೊದಲ ಚಿತ್ರಕ್ಕೇ ಶಿವಣ್ಣ ಹೀರೋ. ಅದೇ ಖುಷಿ. ಚಿಕ್ಕಂದಿನಿಂದ ನನಗೆ ಮಣಿರತ್ನಂ ಚಿತ್ರಗಳೆಂದರೆ ಇಷ್ಟ. ಈಗ ನನ್ನ ಮೊದಲ ಚಿತ್ರಕ್ಕೆ ಶಿವಣ್ಣ ಹೀರೋ. ಇನ್ನೇನು ಬೇಕು ಎನ್ನುವುದು ಅರ್ಜುನ್ ಜನ್ಯಾ ಪ್ರಶ್ನೆ. ನನ್ನ ಕಥೆಗೆ ಶಿವಣ್ಣ ಯೆಸ್ ಎಂದರು. ಜೊತೆಗೆ ರಮೇಶ್ ರೆಡ್ಡಿಯಂತಾ ಪ್ರೊಡ್ಯೂಸರ್ ಸಿಕ್ಕರು. ಅವರೇ ನನ್ನ ಶಕ್ತಿ ಎಂದಿದ್ದಾರೆ ಅರ್ಜುನ್.

ಆನಂದ್ ಸಿನಿಮಾ ನೋಡಿ ಶಿವಣ್ಣ ಅವರನ್ನು ನೋಡೋಕೆ ಅವರ ಮನೆಗೆ ಹೋಗಿದ್ದೆ. ಆಗಿರಲಿಲ್ಲ. ಈಗ ಅವರ ಚಿತ್ರಕ್ಕೆ ಪ್ರೊಡ್ಯೂಸರ್. ಐ ಯಾಮ್ ಲಕ್ಕಿ ಎಂದ ರಮೇಶ್ ರೆಡ್ಡಿ, ಅರ್ಜುನ್ ಜನ್ಯಾ ಸಿದ್ಧ ಪಡಿಸಿರುವ ಕಥೆ ವಿಭಿನ್ನವಾಗಿದೆ. ವಿಶೇಷವಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳಿಗೇ 3 ತಿಂಗಳು ಬೇಕು. ನಂತರ ಶಿವಣ್ಣ ಅವರ ಕಾಲ್‍ಷೀಟ್ ಶೆಡ್ಯೂಲ್ ನೋಡಿಕೊಂಡು ಶೂಟಿಂಗ್ ಶುರು ಮಾಡುತ್ತೇವೆ ಎಂದಿದ್ದಾರೆ ರಮೇಶ್ ರೆಡ್ಡಿ.