KGF Chapter 2 ಸೃಷ್ಟಿಸಿದ ಸಂಚಲನ, ದಾಖಲೆಗಳಿಗೆ ಲೆಕ್ಕವೇ ಇಲ್ಲ. ರಾಕಿಭಾಯ್ ನ್ಯಾಷನಲ್ ಸ್ಟಾರ್ ಆಗಿದ್ದು ಇದೇ ಚಿತ್ರದಿಂದ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿದ್ದ ಚಿತ್ರದ ಮೂಲಕ ಹೊಂಬಾಳೆ ದೇಶದ ನಂ.1 ಚಿತ್ರ ಸಂಸ್ಥೆಯಾಗಿದ್ದು ಈಗ ಇತಿಹಾಸ. ಪ್ರಶಾಂತ್ ನೀಲ್ ಈಗ ದೇಶದ ಟಾಪ್ ಡೈರೆಕ್ಟರ್ಗಳಲ್ಲಿ ಒಬ್ಬರು. ಚಿತ್ರ ರಿಲೀಸ್ ಆಗಿ ಈಗ ಒಟಿಟಿಗಳಲ್ಲಿಯೂ ಸಿಗುತ್ತಿದೆ. ಹೀಗಿರುವಾಗಲೇ ಬಾಲಿವುಡ್ ಒಂದು ಲೆಕ್ಕಾಚಾರ ಕೊಟ್ಟಿದೆ. ಇದು ಫೈನಲ್ ಲೆಕ್ಕವಂತೆ. ಈ ಲೆಕ್ಕದ ಪ್ರಕಾರ..
ಕರ್ನಾಟಕ ₹171.50 ಕೋಟಿ
ಆಂಧ್ರ/ ತೆಲಂಗಾಣ ₹150 ಕೋಟಿ
ತಮಿಳುನಾಡು ₹109.70 ಕೋಟಿ
ಕೇರಳ ₹66.10 ಕೋಟಿ
ಉತ್ತರ ಭಾರತ ₹494.30 ಕೋಟಿ
=======================
ಒಟ್ಟು ₹991.60 ಕೋಟಿ
ಇನ್ನು ವಿದೇಶಗಳ ಲೆಕ್ಕಾಚಾರಕ್ಕೆ ಬರುವುದಾದರೆ..
ಉತ್ತರ ಅಮೆರಿಕಾ $7.45 million
ಮಧ್ಯ ಪ್ರಾಚ್ಯ $8.13 million
ಆಸ್ಟೇಲಿಯಾ $2.53 million
ನ್ಯೂಜಿಲ್ಯಾಂಡ್ $0.43 million
ಮಲೇಷ್ಯಾ $2.45 million
ಸಿಂಗಾಪುರ $0.90 million
ನೇಪಾಳ $1.05 million
ಏಪ್ಯಾ $0.65 million
ಯುಕೆ- $1.46 million
ಯುರೋಪ್ $1.50 million
ಉಳಿದ ರಾಷ್ಟ್ರಗಳು $0.50 million
=================
ಒಟ್ಟು ಲೆಕ್ಕ ₹206.60 ಕೋಟಿ
ಈ ಎರಡನ್ನೂ ಒಟ್ಟು ಮಾಡಿದಾಗ ಬರುವ ಮೊತ್ತ 1200 ಕೋಟಿ
ಚಿತ್ರವನ್ನು ಥಿಯೇಟರುಗಳಲ್ಲಿ ನೋಡಿದವರ ಸಂಖ್ಯೆ ಐದೂವರೆ ಕೋಟಿ.