` ಅಪ್ಪಂಗೂ ಶಕುಂತಲ.. ಮಗನಿಗೂ ಶಕುಂತಲಾ.. : ತ್ರಿವಿಕ್ರಮ ಶೇಕ್ ಶೇಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪಂಗೂ ಶಕುಂತಲ.. ಮಗನಿಗೂ ಶಕುಂತಲಾ.. : ತ್ರಿವಿಕ್ರಮ ಶೇಕ್ ಶೇಕ್
Trivikrama Movie Image

ವಿಕ್ರಂ ರವಿಚಂದ್ರನ್ ನಟನೆಯ ಮೊದಲ ಸಿನಿಮಾ ತ್ರಿವಿಕ್ರಮ. ಇದೇ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ಲೀಸ್ ಮಮ್ಮಿ ಹಾಡು ಹಿಟ್ ಆಗಿದ್ದು, ಈಗ ಇನ್ನೊಂದು ಹಾಡು ರಿಲೀಸ್ ಆಗಿದೆ. ಶೇಕ್ ಯುವರ್ ಬಾಡಿ ಶಕುಂತಲ.. ಹಾಡು.

ಹಾಡಿನಲ್ಲಿ ವಿಕ್ರಂ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಆಕಾಂಕ್ಷಾ ಶರ್ಮ ಮುದ್ದು ಮುದ್ದಾಗಿ ಕಾಣುತ್ತಾರೆ. ಈ ಹಾಡಿಗೆ ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ನಕಾಶ್ ಅಜೀಝ್ ಮತ್ತು ಐಶ್ವರ್ಯಾ ರಂಗರಾಜ್ ಹಾಡಿರುವ ಹಾಡಿಗೆ ಸಂಗೀತ ನೀಡಿರುವುದು ಅರ್ಜುನ್ ಜನ್ಯಾ.

ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಲವ್ ಸ್ಟೋರಿ ಮೂಲಕವೇ ವಿಕ್ರಂ ರವಿಚಂದ್ರನ್ ಎಂಟ್ರಿ ಕೊಡುತ್ತಿದ್ದಾರೆ. ರಾಮ್ಕೋ ಸೋಮಣ್ಣ ನಿರ್ಮಾಣದ ಚಿತ್ರ ಈಗ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

ಅಂದಹಾಗೆ ರವಿಚಂದ್ರನ್ ಸಿನಿಮಾ ಎಂದರೆ ನೆನಪಾಗುವ ಹಲವು ನೆನಪುಗಳಲ್ಲಿ ಶಕುಂತಲೆಯೂ ಇದ್ದಾಳೆ. ಪ್ರೇಮಲೋಕದ ನೀನಾ ಶಕುಂತಲ.. ಅನ್ನೋ ಲೈನು ಇಷ್ಟು ವರ್ಷಗಳ ನಂತರವೂ ಪ್ರೇಕ್ಷಕರ ಎದೆಯಲ್ಲಿ ಹಚ್ಚಹಸಿರು. ಈಗ ವಿಕ್ರಂ ಕೂಡಾ ಶಕುಂತಲೆಯ ನೆನಪಲ್ಲೇ ಹಾಡಿ ಕುಣಿಯುತ್ತಿದ್ದಾರೆ. ಶಕುಂತಲೆಗೆ ಮಾತ್ರ.. ವಯಸ್ಸೇ ಆಗಿಲ್ಲ.