ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿಯ ಮೊದಲ ಮಗನಿಗೆ ಅವ್ಯನ್ ದೇವ್ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವಾದ ಹೆಸರಿದು. ಜೆಪಿ ನಗರದ ವೆಂಕಟೇಶ್ವರ ದೇಗುಲದಲ್ಲಿ ಶಾಸ್ತ್ರೋಕ್ತವಾಗಿ ನಡೆದ ನಾಮಕರಣ ಮಹೋತ್ಸವದಲ್ಲಿ ಅವರವರ ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಪ್ರಪೌತ್ರ ಜನನ ಶಾಂತಿ ಹಾಗೂ ದೇವೇಗೌಡ ದಂಪತಿಗೆ ಕನಕಾಭಿಷೇಕ ಮಾಡಲಾಯಿತು.
ಅನಿತಾ ಕುಮಾರಸ್ವಾಮಿ ಮೊಮ್ಮಗನಿಗೆ ಚಿನ್ನದ ಸರ, ಬಳೆಗಳನ್ನು ಉಡುಗೊರೆಯಾಗಿ ಕೊಟ್ಟರು. ದೇವೇಗೌಡ, ಚೆನ್ನಮ್ಮ ದಂಪತಿಗೆ ತಟ್ಟೆ ತುಂಬಾ ಚಿನ್ನವನ್ನಿಟ್ಟು ಕನಕಾಭಿಷೇಕ ಮಾಡಲಾಯಿತು.
ಅಂದಹಾಗೆ ಅವ್ಯನ್ ದೇವ್ ಎಂದರೆ ಅರ್ಥವೇನು ಗೊತ್ತೇ? ಇದು ಗಣೇಶ ಮತ್ತು ವಿಷ್ಣುವಿನ ಇನ್ನೊಂದು ಹೆಸರು. ಇದಕ್ಕೆ ಇನ್ನೊಂದು ಅರ್ಥವೂ ಇದೆ. ಅದೃಷ್ಟವಂತ ಮಗು ಎನ್ನುವುದು ಅವ್ಯನ್ ದೇವ್ ಪದದ ಇನ್ನೊಂದು ಅರ್ಥ. ಮಗುವಿಗೆ ಹೆಸರು ಫೈನಲ್ ಮಾಡಿದ್ದು ರೇವತಿ ಅವರಂತೆ. ನ್ಯೂಮರಾಲಜಿ ಪ್ರಕಾರವೂ ಈ ಹೆಸರು ಸೂಕ್ತವಾಗಿದೆ ಎಂದಿದ್ದಾರೆ ನಿಖಿಲ್-ರೇವತಿ ದಂಪತಿ.