` ನಾಳೆ ಪ್ರೀಮಿಯರ್ ಶೋ.. 10ಕ್ಕೆ ಹಬ್ಬ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಾಳೆ ಪ್ರೀಮಿಯರ್ ಶೋ.. 10ಕ್ಕೆ ಹಬ್ಬ..!
Charlie 777

777 ಚಾರ್ಲಿ ಚಿತ್ರದ ಪ್ರೀಮಿಯರ್ ಶೋಗಳು ಈಗಾಗಲೇ ದೇಶಾದ್ಯಂತ ನಡೆಯುತ್ತಿವೆ. ಯುನಿವರ್ಸಲ್ ಸಬ್ಜೆಕ್ಟ್ ಇರುವ ಕಥೆ ಚಿತ್ರದಲ್ಲಿದೆ. ಧರ್ಮನಾಗಿ ರಕ್ಷಿತ್ ಶೆಟ್ಟಿ ನಟಿಸಿದ್ದು, ಧರ್ಮ ಮತ್ತು ನಾಯಿ ಚಾರ್ಲಿಯ ನಡುವಿನ ಭಾವನಾತ್ಮಕ ಕಥೆಯೇ ಚಿತ್ರದ ಕಥೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶಕ. ಈಗಾಗಲೇ ರಮ್ಯಾ, ಮನೇಕಾ ಗಾಂಧಿ ಸೇರಿದಂತೆ ಹಲವರು ಚಿತ್ರ ನೋಡಿದ್ದಾರೆ. ಮೆಚ್ಚಿದ್ದಾರೆ. ಇಂಡಿಯಾದ ಒಟ್ಟು 21 ನಗರಗಳಲ್ಲಿ ಸಿನಿಮಾ ಪ್ರೀಮಿಯರ್ ಶೋಗಳು ನಡೆದಿವೆ. ಇನ್ನು ನಾಳೆ ಪ್ರೀಮಿಯರ್ ಶೋಗಳಿವೆ. ಕರ್ನಾಟಕದಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ 100ಕ್ಕೂ ಹೆಚ್ಚು ಪ್ರೀಮಿಯರ್ ಶೋಗಳಿವೆ.

ಈ ಸಿನಿಮಾ ನೋಡಿದ ನಂತರ ನೀವೆಲ್ಲ ನಾಯಿಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಕಂಟೆಂಟ್ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮ ಚಿತ್ರಗಳೇ ಮಾತನಾಡಬೇಕು ಅನ್ನೋ ಕಾನ್ಫಿಡೆನ್ಸ್ ರಕ್ಷಿತ್ ಶೆಟ್ಟಿ ಅವರದ್ದು. ಸಂಗೀತಾ ಶೃಂಗೇರಿ, ಶಾರ್ವರಿ, ರಾಜ್ ಬಿ.ಶೆಟ್ಟಿ.. ಮೊದಲಾದವರು ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಚಾರ್ಲಿಯೇ ಹೀರೋ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರ ಹಾಗೂ ಚಿತ್ರದ ಕಾನ್ಸೆಪ್ಟ್ ಕನ್ನಡಕ್ಕೆ ಹೊಸದು. ಪ್ರೀಮಿಯರ್ ಶೋ ಮುಗಿದ ಮಾರನೇ ದಿನ ಅರ್ಥಾತ್ ಜೂನ್ 10ಕ್ಕೆ ಜಗತ್ತಿನಾದ್ಯಂತ ಚಾರ್ಲಿ ಹಬ್ಬ ಶುರುವಾಗಲಿದೆ.

777 ಚಾರ್ಲಿ ಸಿನಿಮಾ ಕನ್ನಡದಲ್ಲಿಯೇ 1000+ ಸ್ಕ್ರೀನ್‍ಗಳಲ್ಲಿ ಹಾಗೂ ವಿದೇಶಗಳಲ್ಲಿ 500+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.