ಸದ್ಯಕ್ಕೆ ಕನ್ನಡಿಗರಿಗೆ ಮೇಘಾ ಶೆಟ್ಟಿ ಎಂದರೆ ತಕ್ಷಣ ಗೊತ್ತಾಗದೇ ಇರಬಹುದು. ಅನು ಸಿರಿಮನೆ ಎಂದರೆ ಓ.. ಜೊತೆ ಜೊತೆಯಲಿ ಎನ್ನುತ್ತಾರೆ. ಮೇಘಾ ಶೆಟ್ಟಿ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಜೊತೆಗೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸುತ್ತಿರೋ ಮೇಘಾ ಶೆಟ್ಟಿ, ಪ್ಯಾನ್ ಇಂಡಿಯಾ ಸಿನಿಮಾವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಚಿತ್ರವೀಗ ಸದ್ದು ಮಾಡಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರೋ ಚಿತ್ರತಂಡ ಈಗ ಪೋಸ್ಟರ್ ರಿವೀಲ್ ಮಾಡಿದೆ. ಆಫ್ಟರ್ ಆಪರೇಷನ್ ಲಂಡನ್ ಕೆಫೆ.
ಚಿತ್ರದ ಹೀರೋ ಕವೀಶ್ ಶೆಟ್ಟಿ. ನಿರ್ದೇಶಕ ಸಡಗರ ರಾಘವೇಂದ್ರ. ರಿಷಬ್ ಶೆಟ್ಟಿಯವರ ಗೆಳೆಯ. ಹೀಗಾಗಿಯೇ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ರಿಷಬ್ ಶೆಟ್ಟಿ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಷ್ಟೇ ಅಲ್ಲದೆ, ಮರಾಠಿಯಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವುದು ಚಿತ್ರದ ವಿಶೇಷ.
ಮೇಘಾ ಶೆಟ್ಟಿ ಶಿವಾನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀರೋ ಕವೀಶ್ ಶೆಟ್ಟಿ ಅವರ ಪಾತ್ರದ ಹೆಸರು ಸುರ್ವೆ. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಚಿತ್ರದ ನಿರ್ಮಾಪಕರು.