ಕೆಜಿಎಫ್ ಚಾಪ್ಟರ್ 2, 50 ದಿನ ಪೂರೈಸಿದೆ. ಇಂಡಿಯಾದಲ್ಲಿ 390ಕ್ಕೂ ಹೆಚ್ಚು ಕೇಂದ್ರಗಳಲ್ಲಿ, ವಿದೇಶಗಳಲ್ಲಿ 10 ಕೇಂದ್ರಗಳಲ್ಲಿ 50 ದಿನ ಪೂರೈಸಿರುವುದು ಒಂದು ದಾಖಲೆಯೇ. ವಿಶ್ವದಾಖಲೆಯೇ.
ಈ ಹಾದಿಯಲ್ಲಿ ಕೆಜಿಎಫ್ ಎದುರು ನಿಂತ ಚಿತ್ರಗಳು ಸಣ್ಣ ಚಿತ್ರಗಳೇನೂ ಅಲ್ಲ. ಪ್ರಾದೇಶಿಕ ಚಿತ್ರಗಳ ಜೊತೆಗೆ ಬಾಲಿವುಡ್ ಚಿತ್ರಗಳೂ ಬಂದವು. ಹಾಲಿವುಡ್ ಚಿತ್ರಗಳೂ ಬಂದವು. ಕೆಲವು ಗೆದ್ದವು. ಇನ್ನೂ ಕೆಲವು ಬಿದ್ದವು. ಅವೆಲ್ಲವನ್ನೂ ಎದುರಿಸಿಯೇ ಗೆದ್ದ ಚಿತ್ರ ಕೆಜಿಎಫ್ ಚಾಪ್ಟರ್ 2.
ಅಂದಹಾಗೆ ಇವತ್ತಿನಿಂದ ಕೆಜಿಎಫ್ ಚಾಪ್ಟರ್ 2, ಒಟಿಟಿಯಲ್ಲಿ ನೇರವಾಗಿಯೇ ಸಿಗಲಿದೆ. ಅಂದರೆ ಇದುವರೆಗೆ ಇದ್ದ ದುಡ್ಡು ಕೊಟ್ಟು ವೀಕ್ಷಿಸುವ ಅಗತ್ಯವಿಲ್ಲ. ಅಮೇಜಾನ್ ಪ್ರೈಂ ಇದ್ದವರು ಉಚಿತವಾಗಿಯೇ ನೋಡಬಹುದು. ಇದುವರೆಗೆ ಸಬ್‍ಸ್ಕ್ರಿಪ್ಷನ್ ಇದ್ದರೂ, 199 ರೂ. ಕೊಟ್ಟು ನೋಡಬೇಕಿತ್ತು.
ಅಂದಹಾಗೆ ಇದುವರೆಗೆ ಈ ಚಿತ್ರ ಥಿಯೇಟರುಗಳಲ್ಲಿ 1240 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದೂ ದಾಖಲೆಯೇ..