ಒಂದು ಸಿನಿಮಾ ಹೇಗಿರುತ್ತೆ ಅನ್ನೋದನ್ನು ಟೀಸರ್, ಟ್ರೇಲರುಗಳಲ್ಲೇ ನಿರ್ಧರಿಸಬಹುದು. ಚಿತ್ರದ ಇಡೀ ಹೂರಣ ಗೊತ್ತಾಗದೇ ಹೋದರೂ.. ನಿರ್ದೇಶಕರ ಕಲ್ಪನೆ, ಅವರ ಸೃಜನಶೀಲತೆಯ ಶಕ್ತಿ, ಸಿನಿಮಾದ ತಾಕತ್ತು ಅರ್ಥವಾಗುತ್ತದೆ. 777 ಚಾರ್ಲಿ ಮಾಡಿದ್ದೂ ಅದನ್ನೇ. ಚಿತ್ರ ಟೀಸರ್ ರಿಲೀಸ್ ಆಗುವಾಗಲೇ ಭರವಸೆ ಹುಟ್ಟಿಸಿತ್ತು. ಅದರ ಜೊತೆಗೆ ರಕ್ಷಿತ್ ಶೆಟ್ಟಿಯವರ ಹಿಂದಿನ ಚಿತ್ರಗಳ ಟ್ರ್ಯಾಕ್ ರೆಕಾರ್ಡ್ ಕೂಡಾ ಹಾಗೆಯೇ ಇದ್ದ ಕಾರಣ, ವಿಶ್ವಾಸವೂ ಹುಟ್ಟಿತ್ತು. ಹೀಗಾಗಿಯೇ.. ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ಚಿತ್ರವನ್ನು ರಿಲೀಸ್ ಮಾಡೋಕೆ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು, ಸಂಸ್ಥೆಗಳು ಮುಂದೆ ಬಂದಿವೆ.
ತೆಲುಗಿನಲ್ಲಿ ರಾಣಾ ದಗ್ಗುಬಾಟಿ : ಬಾಹುಬಲಿಯ ಬಲ್ಲಾಳದೇವ ತೆಲುಗಿನಲ್ಲಿ ತಮ್ಮದೇ ಆದ ಸುರೇಶ್ ಪ್ರೊಡಕ್ಷನ್ಸ್ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ನೋಡಿದ ದಿನದಿಂದ ಟಚ್ನಲ್ಲಿದ್ದ ಅವರು ಇಡೀ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ತಮಿಳಿನಲ್ಲಿ ಕಾರ್ತಿ ಸುಬ್ಬರಾಜ್ : ಪಿಜ್ಜಾ, ಜಿಗರ್ಥಾಂಡಾ, ಇರವಿ, ಮಕ್ರ್ಯುರಿ, ಪೆಟ್ಟಾ, ಪೆಂಗ್ವಿನ್.. ನಂತರ ವಿಭಿನ್ನ ಕಥೆಗಳನ್ನೇ ಮಾಡಿ ಗೆದ್ದಿರುವ ನಿರ್ದೇಶಕ. ರಕ್ಷಿತ್ ಶೆಟ್ಟಿ ಜೊತೆ ಒಂದು ಸಿನಿಮಾ ಮಾಡುವ ಆಸಕ್ತಿಯನ್ನೂ ತೋರಿಸಿದ್ದರು. ತಮಿಳಿನಲ್ಲಿ ರಿಲೀಸ್ ಮಾಡುತ್ತಿರೋದು ಇವರೇ.
ಮಲಯಾಳಂನಲ್ಲಿ ಪೃಥ್ವಿರಾಜ್ : ಇವರ ಪೂರ್ತಿ ಹೆಸರು ಪೃಥ್ವಿರಾಜ್ ಸುಕುಮಾರನ್. ಹಳೆಯ ಚಿತ್ರಗಳನ್ನು ಬಿಟ್ಟ, ಇತ್ತೀಚಿನ ಸಿನಿಮಾಗಳನ್ನಷ್ಟೇ ತೆಗೆದುಕೊಂಡರೂ ಉತ್ತಮ ಚಿತ್ರಗಳ ಲಿಸ್ಟು ದೊಡ್ಡದು. ಅಯ್ಯಪ್ಪನುಮ್ ಕೋಶಿಯುಮ್, ಡ್ರೈವಿಂಗ್ ಲೈಸೆನ್ಸ್, ಕುರುತ್ತಿ, ಕೋಲ್ಡ್ ಕೇಸ್, ಬ್ರೋಡ್ಯಾಡಿ, ಜನಗಣಮನ.. ಇತ್ತೀಚಿನ ಚಿತ್ರಗಳು. ಅವರಿಗೆ 777 ಚಾರ್ಲಿಯ ಸ್ಟೋರಿ ಹೇಳಿದ್ದು ಮಿಕ್ಸಿಂಗ್ ಎಂಜಿನಿಯರ್ ರಾಜಾ ಕೃಷ್ಣನ್. ಸಿನಿಮಾ ನೋಡಿದ ಪೃಥ್ವಿರಾಜ್ ಮಲಯಾಳಂನಲ್ಲಿ ಸಿನಿಮಾ ವಿತರಣೆ ಹಕ್ಕು ತೆಗೆದುಕೊಂಡಿದ್ದಾರೆ. ಅವರೂ ಕೂಡಾ ನಾಯಿಪ್ರೇಮಿ ಅನ್ನೋದು ಸ್ಪೆಷಲ್ಲು.
ಹಿಂದಿಯಲ್ಲಿ ಯುಎಫ್ಓ : ಒಂದೊಳ್ಳೆ ಚಿತ್ರದ ಮೂಲಕ ಇಡೀ ಇಂಡಿಯಾವನ್ನು ತಲುಪುವ ಐಡಿಯಾ ಇಟ್ಟುಕೊಂಡು ಬಂದಿರೋ ಯುಎಫ್ಓ, 777 ಚಾರ್ಲಿಯನ್ನು ಹಿಂದಿಯಲ್ಲಿ ದೇಶದಾದ್ಯಂತ ರಿಲಿಸ್ ಮಾಡುತ್ತಿದೆ.
ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ಬಾಬ್ಬಿ ಸಿಂಹ ನಟಿಸಿರೋ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನವಿದೆ. ಸಿನಿಮಾ ಜೂನ್ 10ರಂದು ರಿಲೀಸ್ ಆಗುತ್ತಿದ