ಬಾನ ದಾರಿಯಲ್ಲಿ ಚಿತ್ರತಂಡ ಮೊದಲಿಗೆ ಗಣೇಶ್ ಅವರ ಪಾತ್ರದ ಲುಕ್ ತೋರಿಸಿತ್ತು. ಕಾಡಿನ ನಡುವೆ ಇರುವ ಗಣೇಶ್ ಮತ್ತು ಸರ್ಫಿಂಗ್ ಮಾಡುತ್ತಿರುವ ಗಣೇಶ್ ಅವರ ಪೋಸ್ಟರ್ ಹೊರಬಿಟ್ಟಿದ್ದರು ಪ್ರೀತಮ್ ಗುಬ್ಬಿ.
ಅದಕ್ಕೆ ಮ್ಯಾಚ್ ಆಗುವಂತೆ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಅವರ ಪಾತ್ರ ಲೀಲಾ ಅವರನ್ನು ಪರಿಚಯಿಸಿದ್ದರು ಪ್ರೀತಮ್. ಲೀಲಾ ಹೆಸರಿನ ಪಾತ್ರದಲ್ಲಿ ರುಕ್ಮಿಣಿ ಸರ್ಫಿಂಗ್ ಮಾಡುವ ಪೋಸ್ಟರ್ ಬಿಟ್ಟು ಕುತೂಹಲ ಹೆಚ್ಚಿಸಿದ್ದರು. ಈಗ ಚಿತ್ರದ ಇನ್ನೊಬ್ಬ ನಾಯಕಿ ರೀಷ್ಮಾ ನಾಣಯ್ಯ ಅವರ ಪೋಸ್ಟರ್ ಬಿಟ್ಟಿದ್ದಾರೆ.
ರೀಷ್ಮಾ ಚಿತ್ರದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ನಟಿಸುತ್ತಿದ್ದಾರೆ. ಪಾತ್ರದ ಹೆಸರು ಕಾದಂಬರಿ.
ಶ್ರೀವಾರಿ ಟಾಕೀಸ್ನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಶುರುವಾಗುತ್ತಿದೆ. ಪ್ರೀತಾ ಜಯರಾಮನ್ ಅವರ ಕಥೆಗೆ ಪ್ರೀತಮ್ ಗುಬ್ಬಿಯವರೇ ಚಿತ್ರಕಥೆ ಬರೆದಿದ್ದಾರೆ. ಬೆಂಗಳೂರು, ಚೆನ್ನೈ, ವಾರಾಣಸಿಯ ಕಥೆ ಆಫ್ರಿಕಾಗೂ ಹೋಗಲಿದೆ. ಮೇ 25ರಂದು ಶೂಟಿಂಗ್ ಸ್ಟಾರ್ಟ್.