ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಬಘೀರ ಶುರುವಾಗಿದೆ. ಮದಗಜ ನಂತರ ಶುರುವಾಗುತ್ತಿರೋ ಸಿನಿಮಾ ಇದು. ಇಂಡಿಯಾದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಶುರುವಾಗುತ್ತಿರೋ ಸಿನಿಮಾ ಬಘೀರ.
ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಮುಹೂರ್ತ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರ ತಮ್ಮ ಮಂಜುನಾಥ್ ಕ್ಲಾಪ್ ಮಾಡಿದರೆ, ನಿರ್ದೇಶಕ ಸೂರಿಯವರ ತಾಯಿ ಸರೋಜ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಪ್ರಶಾಂತ್ ನೀಲ್ ಅವರ ಕಥೆ ಬಘೀರ ಚಿತ್ರಕ್ಕಿದೆ. ಉಗ್ರಂ ನಂತರ ಪ್ರಶಾಂತ್ ನೀಲ್ ಅವರ ಕಥೆಯಲ್ಲಿ ಶ್ರೀಮುರಳಿ ನಟಿಸುತ್ತಿರೋ ಚಿತ್ರವಿದು. ಮೇ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಅಜನೀಶ್ ಲೋಕನಾಥ್ ಸಂಗೀತವಿದೆ.