ಆರ್.ಆರ್.ಆರ್. ನಂತರ ಎನ್.ಟಿ.ಆರ್. ನಟಿಸುತ್ತಿರೋದು ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ. ಅದು ಮುಗಿಯುತ್ತಿದ್ದಂತೆಯೇ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಅಷ್ಟು ಹೊತ್ತಿಗೆ ಪ್ರಶಾಂತ್, ಪ್ರಭಾಸ್ ಜೊತೆಗಿನ ಸಲಾರ್ ಚಿತ್ರವನ್ನು ಮುಗಿಸಿರಬೇಕು. ಎನ್.ಟಿ.ಆರ್. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕಥೆಯ ಬಗ್ಗೆ ಅಲ್ಲೇ ಒಂದು ಕ್ಲೂ ಕೊಟ್ಟಿದ್ದಾರೆ.
ರಕ್ತದಲ್ಲಿ ನೆಂದ ನೆಲವಷ್ಟೇ ನೆನಪಿನಲ್ಲಿ ಇರೋಕೆ ಯೋಗ್ಯ. ಅವನ ನೆಲ ರಕ್ತದಲ್ಲಿ ತೋಯ್ದಿದೆ. ಆದರೆ ಅವನ ರಕ್ತದಲ್ಲಿ ಅಲ್ಲ.. ಎನ್ನುವ ಲೈನ್ ಕೊಟ್ಟಿದ್ದಾರೆ ನೀಲ್. ಅದರಲ್ಲೇ ಕಥೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳಬಹುದು. ಎನ್.ಟಿ.ಆರ್.ಗೆ ವಯಸ್ಸಾದ ವ್ಯಕ್ತಿಯ ಲುಕ್ ಕೊಟ್ಟಿರೋ ಪ್ರಶಾಂತ್ ನೀಲ್, ಬಹುಶಃ ಹಳ್ಳಿ ಅಥವಾ ಜನಾಂಗವೊಂದರ ಹೋರಾಟದ ಕಥೆ ಇಟ್ಟುಕೊಂಡಿದ್ದಾರೆ ಎನಿಸುತ್ತಿದೆ.