ವಸಿಷ್ಠ ಸಿಂಹ. ನಟ ಮತ್ತು ಗಾಯಕ ಮತ್ತೀಗ ನಾಯಕ. ತೆರೆ ಮೇಲೆ ನಿಮಿಷಗಳಷ್ಟು ಅವಕಾಶ ಸಿಕ್ಕರೂ ಇಡೀ ಚಿತ್ರವನ್ನೇ ಆವರಿಸಿಕೊಳ್ಳೋ ತಾಕತ್ತಿರುವ ನಟ. ಈಗ ಲವ್ ಲೀ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಹೀಗಾಗಿ ದೊಡ್ಡ ಮಟ್ಟದಲ್ಲೇ ಎಂಟ್ರಿ ಕೊಡುತ್ತಿದ್ದಾರೆ.
ಹೀಗಾಗಿಯೇ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರದ ಎಂಟ್ರಿ ಸೀನ್‍ನ್ನು ಭರ್ಜರಿಯಾಗಿಯೇ ಚಿತ್ರೀಕರಿಸಲಾಗಿದೆ. 50ಕ್ಕೂ ಹೆಚ್ಚು ಫೈಟರ್ಸ್ ಜೊತೆ ಹೊಡೆದಾಟದ ದೃಶ್ಯ ಚಿತ್ರೀಕರಿಸಿದ್ದಾರೆ ಡೈರೆಕ್ಟರ್ ಚೇತನ್ ಕೇಶವ್.
ರೋಪ್ ಬಳಸಿ, 360 ಡಿಗ್ರಿ ಆಂಗಲ್‍ನಲ್ಲಿ ಫೈಟಿಂಗ್ ಸೀನ್ ಚಿತ್ರೀಕರಿಸಲಾಗಿದೆ. ವಸಿಷ್ಠ ಸಿಂಹ ಜೊತೆ ಸಾಹಸ ದೃಶ್ಯದಲ್ಲಿದ್ದವರು ಶೋಭರಾಜ್, ಕಾಕ್ರೋಚ್ ಸುಧಿ ಮತ್ತು ವರದ. ಇದೊಂದು ರೊಮ್ಯಾಂಟಿಕ್ ಕಮ್ ಆ್ಯಕ್ಷನ್ ಸಿನಿಮಾ. ರೌಡಿಸಂ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯೋ ಕಥೆ. ವಸಿಷ್ಠ ಸಿಂಹ ಎದುರು ಸಮೀಕ್ಷಾ ನಾಯಕಿಯಾಗಿದ್ದಾರೆ. ಜೇಮ್ಸ್ ಚಿತ್ರದಲ್ಲಿ ನಟಿಸಿದ್ದ ಸಮೀಕ್ಷಾ ಈ ಚಿತ್ರದ ಮೂಲಕ ಸೋಲೋ ಹೀರೋಯಿನ್ ಆಗಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿರುವುದು ರವೀಂದ್ರ ಕುಮಾರ್.