ಹೀರೋ ಪೊಗರು ಸೆನ್ಸೇಷನ್ ಸ್ಟಾರ್ ಚಂದನ್ ಶೆಟ್ಟಿ. ಡೈರೆಕ್ಟರ್ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಹೊರಬಂದಿದೆ. ನಗದೇ ಇದ್ದವನಿಗೆ ಇದ್ನೋಡು ಗ್ರಾಮದ ಊರ್ಬಾಗ್ಲು ಟೀಸ್ಟಾಲ್ನಲ್ಲಿ ಎಲ್ಲ ಫ್ರೀ.. ಎನ್ನುವಷ್ಟು ತರಲೆ.. ತಮಾಷೆ ಇದೆ.
ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಎನ್ನಿಸಿದ್ದ ಚಂದನ್ ಶೆಟ್ಟಿ, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ತಲೆಯನ್ನೇ ಗಿರಗಿರ ಎನ್ನಿಸಿರೋದು ಸುಜಯ್ ಶಾಸ್ತ್ರಿ. ಏರಿದ ಕಿಕ್ ಇಳಿಸೋ ಹಾಗೆ ಸವಾಲ್ ಹಾಕಿರೋದು ನಾಯಕಿ ಅರ್ಚನಾ ಕೊಟ್ಟಿಗೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಡೈರೆಕ್ಟರ್ ಆದ ಸುಜಯ್ ಶಾಸ್ತ್ರ ಅವರಿಗೆ ಇದು 2ನೇ ಸಿನಿಮಾ. ಒಬ್ಬ ಸಂಗೀತ ನಿರ್ದೇಶಕ ನಾಯಕನಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋ ಪ್ರವೀಣ್-ಪ್ರದೀಪ್ ಜೋಡಿ ಭರವಸೆ ಮೂಡಿಸಿದೆ. ಉಷಾ ಗೋವಿಂದರಾಜು ನಿರ್ಮಾಣದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಸೀನಿಯರ್ ಕಲಾವಿದರೇ ಚಿತ್ರದಲ್ಲಿದ್ದಾರೆ. ಟೀಸರ್ನಲ್ಲಿ ಕಥೆಯ ಗುಟ್ಟು ಬಿಡದ ಸುಜಯ್ ಶಾಸ್ತ್ರಿ, ಇದೊಂದು ಪಕ್ಕಾ ಕಾಮಿಡಿ ಮೂವಿ ಅನ್ನೋದನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.ನ