ಗುಳ್ಟು ಚಿತ್ರದಿಂದ ವಂಡರ್ಫುಲ್ ಎನ್ನಿಸಿಕೊಂಡ ಹುಡುಗ ನವೀನ್. ವಾಸ್ತುಪ್ರಕಾರ, ನಡುವೆ ಅಂತರವಿರಲಿ ಖ್ಯಾತಿಯ ಐಶಾನಿ ಶೆಟ್ಟಿ. ಇಬ್ಬರೂ ಒಟ್ಟಿಗೇ ನಟಿಸಿರುವ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ತೆಲುಗಿನ ಪುರಿ ಜಗನ್ನಾಥ್ ಅವರ ಶಿಷ್ಯ ಶ್ರೀಧರ್ ಶಿಕಾರಿಪುರ.
ಚಿತ್ರದಲ್ಲಿ ನನ್ನದು ಬೇರೆಯದೇ ರೀತಿಯ ಪಾತ್ರ. ನನಗಂತೂ ಚಾಲೆಂಜಿಂಗ್ ಆಗಿತ್ತು. ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಎನ್ನುವ ಐಶಾನಿ ಶೆಟ್ಟಿ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ.
ಪುಣ್ಯಕೋಟಿ ಕಥೆಗೂ, ಚಿತ್ರಕ್ಕೂ ಸಂಬಂಧ ಇಲ್ಲ ಎನ್ನುವ ಶ್ರೀಧರ್ ಇದು ನಮ್ಮ ಕಥೆ. ನಿಮ್ಮ ಕಥೆ ಹಾಗೂ ನಮ್ಮ ನಿಮ್ಮೆಲ್ಲರ ಕಥೆ ಎಂದಿದ್ದಾರೆ. ನವೀನ್ ಇಲ್ಲಿ ಆದಿ ಅನ್ನೋ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ನಲ್ಲಿದ್ದು, ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ.