ಬಾಲಿವುಡ್ನಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಹೊಸಬರ ಚಿತ್ರವೊಂದರ ಟೀಸರ್ ಸೆನ್ಸೇಷನ್ ಸೃಷ್ಟಿಸಿದೆ. ಕಾರಣ ಬೇರೇನಲ್ಲ. ಬಾಲಿವುಡ್ನ ದಿಗ್ಗಜರ ಕುಟುಂಬದವರ ಮಕ್ಕಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಹೆಸರು ದಿ ಆರ್ಚಿಸ್.
ಚಿತ್ರದಲ್ಲಿ ಹೀರೋ ಆಗಿರೋದು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದಾ. ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ಮತ್ತು ನಂದಾ ದಂಪತಿಯ ಮಗ.
ನಾಯಕಿಯಾಗಿರೋದು ಸುಹಾನಾ ಖಾನ್. ಶಾರೂಕ್ ಮತ್ತು ಗೌರಿ ಖಾನ್ ಮಗಳು.
ಇನ್ನೊಬ್ಬ ನಾಯಕಿ ಖುಷಿ ಕಪೂರ್. ಬೋನಿ ಕಪೂರ್ ಮತ್ತು ಶ್ರೀದೇವಿಯ 2ನೇ ಮಗಳು.
ಚಿತ್ರದ ನಿರ್ದೇಶಕಿ ಝೋಯಾ ಅಖ್ತರ್. ಇವರು ಜಾವೇದ್ ಅಖ್ತರ್ ಮತ್ತು ಅವರ ಮೊದಲ ಪತ್ನಿ ಹನಿ ಇರಾನಿ ಪುತ್ರಿ. ನಟ ನಿರ್ದೇಶಕ ಫರ್ಹಾನ್ ಅಖ್ತರ್ ಸೋದರಿ.
ಇವರೆಲ್ಲರೂ ಸೇರಿ ಕಾಲೇಜು ಸ್ಟೂಡೆಂಟ್ಸ್ ಕೇಂದ್ರವಾಗಿಟ್ಟುಕೊಂಡು ಮಾಡಿರೋ ಅಡ್ವೆಂಚರ್ ಸಿನಿಮಾ ದಿ ಆರ್ಚಿಸ್. ಝೋಯಾ ಅಖ್ತರ್ ಈಗಾಗಲೇ ಕೆಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವವರು. ನಟಿಸಿರುವವ ಸ್ಟಾರ್ ಮಕ್ಕಳಷ್ಟೇ ಹೊಸಬರು. ಚಿತ್ರ ಒಟಿಟಿಯಲ್ಲಷ್ಟೇ ಬರಲಿದೆ. ನೆಟ್ಫ್ಲಿಕ್ಸ್ನಲ್ಲಿ..