ಕನ್ನಡದಲ್ಲಿ ರ್ಯಾಪ್ ಸಂಗೀತದಲ್ಲಿ ಹೊಸ ಶಕೆ ಆರಂಭಿಸಿದವರು ಇಬ್ಬರು. ಆಲ್ ಓಕೆ ಖ್ಯಾತಿಯ ಅಲೋಕ್ ಮತ್ತು ಚಂದನ್ ಶೆಟ್ಟಿ. ಈ ಇಬ್ಬರೂ ಈಗ ಒಂದಾಗಿದ್ದಾರೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಚಿತ್ರದಲ್ಲಿ ಬ್ಯಾಂಕಾಕ್ ಸಾಂಗ್ನ್ನು ಇಬ್ಬರೂ ರ್ಯಾಪ್ ಸಿಂಗರ್ಸ್ ಒಟ್ಟಿಗೇ ಹಾಡಿದ್ದಾರೆ.
ಈ ಹಾಡಿಗೆ ಸಂಗೀತ ನೀಡಿರೋದು ಅರ್ಜುನ್ ಜನ್ಯಾ. ಪೋಷಕ ಕಲಾವಿದರನ್ನೇ ಹೀರೋಗಳನ್ನಾಗಿಸಿರೋ ಈ ಚಿತ್ರಕ್ಕೆ ರ್ಯಾಂಬೋ 2 ಖ್ಯಾತಿಯ ಅನಿಲ್ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸ್ನೇಹಿತರೊಂದಿಗೆ ಸೇರಿ ಈ ಚಿತ್ರದ ನಿರ್ಮಾಪಕರಲ್ಲೂ ಒಬ್ಬರಾಗಿದ್ದಾರೆ ಅನಿಲ್. ರಂಗಾಯಣ ರಘು, ತಬಲಾ ನಾಣಿ, ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲಿಂಗ್ ಕಥೆಯನ್ನು ಸೆಂಟಿಮೆಂಟ್ನೊಂದಿಗೆ ಹೇಳುತ್ತಿದ್ದಾರೆ ಅನಿಲ್. ಚಿತ್ರ ಈ ತಿಂಗಳ ಕೊನೆಯಲ್ಲಿ ಮೇ 27ರಂದು ರಿಲೀಸ್ ಆಗುತ್ತಿದೆ.
ಆಶಿಕಾ ರಂಗನಾಥ್, ಚಿಕ್ಕಣ್ಣ ಕೂಡಾ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.