ಅವರ ಹೆಸರು ನಂದನ್ ಪ್ರಭು. ಸಿನಿಮಾ ಅವರಿಗೆ ಹೊಸದಲ್ಲ. ಈ ಹಿಂದೆ ಲವ್ ಈಸ್ ಪಾಯ್ಸನ್ ಮತ್ತು ಪ್ರೀತಿಯ ಲೋಕ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದವರು. ಈಗ ಮತ್ತೊಂದು ಸಿನಿಮಾದೊಂದಿಗೆ ಬಂದಿದ್ದಾರೆ. ಚಿತ್ರದ ಹೆಸರು ಓರಿಯೋ. ನಂದನ್ ಪ್ರಭು, ಕಲಾಂ ರಾಷ್ಟ್ರಪತಿಯಾಗುವುದಕ್ಕೂ ಮೊದಲು ಅವರ ಡ್ರೈವರ್ ಆಗಿದ್ದರಂತೆ. ಬಿಎಂಟಿಸಿಯಲ್ಲೂ ಕೆಲಸ ಮಾಡಿದ್ದಾರೆ.
ಕಲಾಂ ಸರ್ ಅವರ ಜೊತೆ ಡ್ರೈವರ್ ಆಗಿದ್ದಾಗ ಅವರು ಒಂದಿಷ್ಟು ಅನುಭವಗಳನ್ನು ಹಂಚಿಕೊಂಡಿದ್ದರು. ಅವರ ಮಾತುಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಮಾಡಿರುವ ಸಿನಿಮಾ ಇದು. ಎಚ್ಚರ ತಪ್ಪಿದರೆ ಏನು ಬೇಕಾದರೂ ಆಗಬಹುದು ಎಂಬ ಸಂದೇಶ ಚಿತ್ರದಲ್ಲಿದೆ ಎಂದಿದ್ದಾರೆ ನಂದನ್ ಪ್ರಭು.
ಚಿತ್ರದ ಪೋಸ್ಟರ್ನಲ್ಲಿ 5 ಹೆಡೆಯ ಹಾವಿನ ಚಿತ್ರವಿದೆ. ಓರಿಯೋ ಅನ್ನೋ ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಅರ್ಥವಿದೆ. ಅವುಗಳನ್ನೆಲ್ಲ ಇಟ್ಟುಕೊಂಡು ಮಾಡಿರುವ ಹಾರರ್ ಥ್ರಿಲ್ಲರ್ ಸಿನಿಮಾ ಓರಿಯೋ ಎನ್ನುತ್ತಾರೆ ನಂದನ್ ಪ್ರಭು. ಓರಿಯೋ ಎಂದರೆ ಒಟ್ಟಾರೆ ಅರ್ಥ ಕತ್ತಲು ಬೆಳಕು ಎಂದಂತೆ.
ಈ ಹಿಂದೆ ರಥಾವರ, ವೈರ, ಪುಟಾಣಿ ಪಂಟ್ರು ಮೊದಲಾದ ಚಿತ್ರಗಳಲ್ಲಿ ನಟಿಸಿರೋ ಸುಜಿತ್ ಮಂಜುನಾಥ್ ಮತ್ತು ಯುಕ್ತ ಎಂಬ ಹೊಸ ಪ್ರತಿಭೆ, ನಿತಿನ್ ಗೌಡ, ಶುಭಿ ಚಿತ್ರದ ನಾಯಕ, ನಾಯಕಿ. ವಿಜಯಶ್ರೀ ಮತ್ತು ವೈಶಾಲಿ ಎಂಬುವರು ಈ ಚಿತ್ರದ ನಿರ್ಮಾಪಕರು.