` ಯಶ್ ಮುಂದಿನ ಸಿನಿಮಾ ಕೆಜಿಎಫ್ 3ನಾ? ನರ್ತನ್ ಸಿನಿಮಾನಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಯಶ್ ಮುಂದಿನ ಸಿನಿಮಾ ಕೆಜಿಎಫ್ 3ನಾ? ನರ್ತನ್ ಸಿನಿಮಾನಾ..?
KGF Chapter 2 Image

ಕೆಜಿಎಫ್ ಚಾಪ್ಟರ್ 2 ಕ್ಲೈಮಾಕ್ಸ್‍ನಲ್ಲಿ ಬಂದ ಒಂದೇ ಒಂದು ದೃಶ್ಯ, ಕೆಜಿಎಫ್ ಚಾಪ್ಟರ್ 3 ಬರಲಿದೆಯೇ ಎಂಬ ಕುತೂಹಲ ಹುಟ್ಟಿಸಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡದವರೂ ಕೂಡಾ ಹೌದೂ ಎಂದೂ ಹೇಳದೆ.. ಇಲ್ಲ ಎಂದೂ ಹೇಳದೆ ಕುತೂಹಲ ಹೆಚ್ಚಿಸಿದ್ದರು. ಅದಾದ ಮೇಲೆ ಹಿಂದಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಯಶ್ ಒಂದಿಷ್ಟು ಕಥೆಯ ಎಳೆ ಸಿದ್ಧವಾಗಿದೆ ಎಂದಿದ್ದರು. ಆದರೆ ಅಫಿಷಿಯಲ್ ಆಗಿಲ್ಲ ಎಂದಿದ್ದರು. ಈಗ ಎಲ್ಲದಕ್ಕೂ ಫುಲ್‍ಸ್ಟಾಪ್ ಬಿದ್ದಿದೆ. ಕೆಜಿಎಫ್ 3 ಬರೋದು ಪಕ್ಕಾ ಆಗಿದೆ. ಅಧಿಕೃತವಾಗಿ.

ಕೆಜಿಎಫ್ 3 ಟೇಕಾಫ್ ಆಗಲಿದೆ. ಈಗಾಗಲೇ ಶೇ.30ರಿಂದ ಶೇ.35ರಷ್ಟು ಶೂಟಿಂಗ್ ಕೂಡಾ ಆಗಿದೆ. ಸದ್ಯಕ್ಕೆ ಪ್ರಶಾಂತ್ ನೀಲ್ ಸಲಾರ್ ಶೂಟಿಂಗ್‍ನಲ್ಲಿದ್ದಾರೆ. ಬಹುಶಃ ಸಲಾರ್ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಕಂಪ್ಲೀಟ್ ಆಗಬಹುದು. ಹೀಗಾಗಿ ನಾವು ಸಲಾರ್ ಮುಗಿದ ಮೇಲೆ ಕೆಜಿಎಫ್ 3 ಶೂಟಿಂಗ್‍ಗೆ ಪ್ಲಾನ್ ಮಾಡಿದ್ದೇವೆ. ಅದು ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

ಇಂಗ್ಲಿಷ್ ಪತ್ರಿಕೆಯೊಂದು ವಿಜಯ್ ಕಿರಗಂದೂರು ಅವರ ಹೇಳಿಕೆ ಕೋಟ್ ಮಾಡಿಯೇ ಈ ವರದಿ ಮಾಡಿದ್ದರೆ, ಹೊಂಬಾಳೆ ಬ್ಯಾನರ್‍ನವರೇ ಆದ ನಿರ್ಮಾಪಕ ಕಾರ್ತಿಕ್ ಗೌಡ ಬೇರೆಯದೇ ಮಾತು ಹೇಳಿದ್ದಾರೆ.

ಸುದ್ದಿಯಾಗಿರುವಂತೆ ಕೆಜಿಎಫ್ 3 ಲಾಂಚ್ ಆಗುತ್ತಿಲ್ಲ. ನಮ್ಮ ಎದುರು ದೊಡ್ಡ ದೊಡ್ಡ ಪ್ರಾಜೆಕ್ಟ್‍ಗಳಿವೆ. ಸದ್ಯಕ್ಕಂತೂ ಲಾಂಚ್ ಆಗುತ್ತಿಲ್ಲ. ಹಾಗೆ ಲಾಂಚ್ ಮಾಡುವಾಗ ಖಂಡಿತಾ ಹೇಳುತ್ತೇವೆ ಎಂದಿದ್ದಾರೆ ಕಾರ್ತಿಕ್ ಗೌಡ. ಆ ಮೂಲಕ ಕೆಜಿಎಫ್ 3 ಸದ್ಯಕ್ಕೆ ಇಲ್ಲ ಎಂದಿದ್ದಾರೆಯೇ ಹೊರತು, ಬರುವುದೇ ಇಲ್ಲ ಎಂದೇನೂ ಹೇಳಿಲ್ಲ.

ಪ್ರಶಾಂತ್ ನೀಲ್ ಕೈಲಿ ಸಲಾರ್ ಇದೆ. ಅದಾದ ನಂತರ ಜೂ.ಎನ್‍ಟಿಆರ್ ಜೊತೆಗಿನ ಚಿತ್ರಕ್ಕೆ ಅಡ್ವಾನ್ಸ್ ತೆಗೆದುಕೊಂಡಿದ್ದಾರೆ. ಅದಾದ ಮೇಲೆ ಹೊಂಬಾಳೆಯವರ ಜೊತೆಯಲ್ಲೇ ಶ್ರೀಮುರಳಿ ಹೀರೋ ಆಗಿರೋ ಬಘೀರ ಚಿತ್ರ ಶೆಡ್ಯೂಲ್ ಆಗಿದೆ. ಹೀಗಿರುವಾಗ.. ವಾಟ್ ನೆಕ್ಸ್ಟ್ ಅನ್ನೋ ಪ್ರಶ್ನೆ ಸಹಜ.

 ಮೂಲಗಳ ಪ್ರಕಾರ ಯಶ್ ಕೆವಿಎನ್ ಸಂಸ್ಥೆಗೆ ಕಾಲ್‍ಷೀಟ್ ಕೊಟ್ಟಿದ್ದಾರೆ. ಅದು ನರ್ತನ್ ಸಿನಿಮಾ ಎನ್ನುವ ಸುದ್ದಿಯೂ ಇದೆ. ಯಶ್ ಆಗಲೀ, ನರ್ತನ್ ಆಗಲೀ.. ಅದನ್ನು ಅಫಿಷಿಯಲ್ ಆಗಿ ಘೋಷಿಸಿಲ್ಲ.

ಹಾಗಾದರೆ ಯಶ್ ಮತ್ತೊಮ್ಮೆ ಕೆಜಿಎಫ್ ಪ್ರಾಜೆಕ್ಟ್‍ನಲ್ಲೇ ಉಳಿಯುತ್ತಾರಾ..? ಅಥವಾ ಹೊಸ ಸಿನಿಮಾ ಕೈಗೆತ್ತಿಕೊಳ್ತಾರಾ..? ಗೊತ್ತಿಲ್ಲ. ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವುದು ಈಗಲೂ ಸಸ್ಪೆನ್ಸ್ ಆಗಿಯೇ ಇದೆ.

ಇತ್ತ ಬಾಕ್ಸಾಫೀಸ್‍ನಲ್ಲಿ ಕೆಜಿಎಫ್ ದಾಖಲೆಗಳ ಬೇಟೆ ಮುಂದುವರೆಯುತ್ತಲೇ ಇದೆ. ಕಾಂಪಿಟೇಷನ್ ಕೊಡುವ ಒಂದೇ ಒಂದು ಸಿನಿಮಾ ಬರುತ್ತಿಲ್ಲ. ಬಂದ ಸ್ಟಾರ್ ಚಿತ್ರಗಳು 5 ವಾರದ ನಂತರವೂ ಕೆಜಿಎಫ್ ಎದುರು ಸೋಲುತ್ತಿವೆ. 4ನೇ ವಾರದ ಕಲೆಕ್ಷನ್ ಕೂಡಾ ನೂರು ಕೋಟಿ ದಾಟಿದೆ. 5ನೇ ವಾರ 100 ಕೋಟಿ ಅಲ್ಲದೇ ಹೋದರೂ.. ಹತ್ತಿರ ಹತ್ತಿರ ಅಷ್ಟೇ ಕಲೆಕ್ಷನ್ ಆಗುವ ನಿರೀಕ್ಷೆ ಮತ್ತು ಸಾಧ್ಯತೆ ಎರಡೂ ಇದೆ.