ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ಜೂನ್ 10ಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗುತ್ತಿರುವ ಚಿತ್ರಕ್ಕೆ ಹಿಂದಿಯಲ್ಲೀಗ ಯುಎಫ್‍ಒ ಬಲ ಸಿಕ್ಕಿದೆ. ಹಿಂದಿಯಲ್ಲಿ ಯುಎಫ್‍ಒ ಸಂಸ್ಥೆಯೇ 777 ಚಾರ್ಲಿಯನ್ನು ಪ್ರಸ್ತುತ ಪಡಿಸುತ್ತಿದೆ.
ಕನ್ನಡದಲ್ಲಿ ಎಲ್ಲ ರೀತಿಯ ಸ್ಯಾಟಲೈಟ್ ಮತ್ತು ಡಿಜಿಟಲ್ ರೈಟ್ಸ್‍ನ್ನು ಕಲರ್ಸ್ ಮತ್ತು ವೂಟ್ಸ್ ಪಡೆದುಕೊಂಡಿವೆ. ದೊಡ್ಡ ಮೊತ್ತಕ್ಕೇ ಮಾರಾಟವಾಗಿದೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಸಂಗೀತಾ ಶೃಂಗೇರಿ ನಾಯಕಿಯಾಗಿರೋ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ದ್ಯಾನಿಷ್ ಸೇಠ್ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಿ.ಎಸ್.ಗುಪ್ತ ಚಿತ್ರದ ನಿರ್ಮಾಪರಲ್ಲೊಬ್ಬರು. ಹೀರೋ ರಕ್ಷಿತ್ ಶೆಟ್ಟಿ, ತಮ್ಮ ಪರಂವಾ ಸ್ಟುಡಿಯೋ ಮೂಲಕ ಚಿತ್ರದ ನಿರ್ಮಾಣಕ್ಕೂ ಕೈಜೋಡಿಸಿದ್ದಾರೆ.