` 21 ಅವರ್ಸ್ ಮೇ 20ಕ್ಕೆ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
21 ಅವರ್ಸ್ ಮೇ 20ಕ್ಕೆ ರಿಲೀಸ್
21 Hours Movie Image

ಡಾಲಿ ಧನಂಜಯ್ ನಟಿಸಿರೋ 21 ಅವರ್ಸ್ ಸಿನಿಮಾ ಮೇ 20ಕ್ಕೆ ರಿಲೀಸ್ ಆಗುತ್ತಿದೆ. ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುವ ಕಥೆ. ಚಿತ್ರದಲ್ಲಿ ಡಾಲಿ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಿರೋ ಡಾಲಿ ಧನಂಜಯ್, ಈ ಬಾರಿ ಕ್ರೈಂ ಥ್ರಿಲ್ಲರ್ ಇನ್ವೆಸ್ಟಿಗೇಷನ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ಜೈಶಂಕರ್ ಮೂಲತಃ ಕನ್ನಡದವರಾದರೂ ನೆಲೆ ಕಂಡುಕೊಂಡಿರೋದು ಕೇರಳದಲ್ಲಿ. ಅಮಿತಾಭ್, ಐಶ್ವರ್ಯಾ ರೈ ಮೊದಲಾದವರ ಜಾಹೀರಾತುಗಳನ್ನು ಡೈರೆಕ್ಟ್ ಮಾಡಿದ್ದ ಅವರಿಗೆ ಇದು ಮೊದಲ ಸಿನಿಮಾ.

ಡಾಲಿ ಧನಂಜಯ್ ಜೊತೆಗೆ ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಹದೇವ್ ಮೊದಲಾದವರು ನಟಿಸಿದ್ದಾರೆ.

ಎನ್.ಎಸ್.ಬಾಲಕೃಷ್ಣ, ಅಭಿಷೇಕ್, ತುಮಕೂರು ರುದ್ರಮೂರ್ತಿ ನಿರ್ಮಾಣದ ಸಿನಿಮಾ ಮೇ 20ಕ್ಕೆ ರಿಲೀಸ್ ಆಗುತ್ತಿದೆ.