ವಿನಯ್ ರಾಜಕುಮಾರ್ ಅಭಿನಯದ ಸಿನಿಮಾ ಅಂದೊಂದಿತ್ತು ಕಾಲ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಆದಿತಿ ಪ್ರಭುದೇವ ಮತ್ತು ಗಟ್ಟಿಮೇಳ ಖ್ಯಾತಿಯ ನಿಶಾ ನಾಯಕಿಯಾಗಿರೋ ಚಿತ್ರದ ಟೀಸರ್ ಹೊರಬಂದಿದೆ.
ಪುನೀತ್ ಅವರ ಬಾನದಾರಿಯಿಂದ ಸೂರ್ಯ ಜಾರಿ ಹೋದ ಹಾಡು ರೇಡಿಯೋದಲ್ಲಿ ಪ್ಲೇ ಆಗುವ ದೃಶ್ಯದೊಂದಿಗೆ ಶುರುವಾಗುವ ಟೀಸರ್‍ಗೆ ಧ್ವನಿ ಕೊಟ್ಟಿರೋದು ಕಥೆ ಹೇಳಿರೋದು ಲವ್ಲಿ ಸ್ಟಾರ್ ಪ್ರೇಮ್. ಪುಟ್ಟಣ್ಣ ಕಣಗಾಲ್ ಅವರಂತೆ ಆಗುವ ಕನಸು ಕಾಣುವ ಹುಡುಗನ ಕಥೆ ಚಿತ್ರದಲ್ಲಿದೆ. ಚೆಂದದ ಟೀಸರ್ ಕೊಟ್ಟಿರುವ ನಿರ್ದೇಶಕ ಕೀರ್ತಿ, ಕಥೆಯ ಸುಳಿವನ್ನು ಕೊಟ್ಟಂತೆ ಕೊಟ್ಟು.. ಗುಟ್ಟಾಗಿಟ್ಟಿದ್ದಾರೆ. ಭುವನ್ ಸುರೇಶ್ ನಿರ್ಮಾಣದ ಅಂದೊಂದಿತ್ತು ಕಾಲದ ಟೀಸರ್ ಹೃದಯ ತಟ್ಟುವಂತಿದೆ.