ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ನಂತರ ಹಲವು ಸ್ಟಾರ್‍ಗಳು ಚಿತ್ರವನ್ನು ನೋಡಿದ್ದಾರೆ. ಮೆಚ್ಚಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರನಟರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇದೀಗ ಶಿವ ರಾಜಕುಮಾರ್ ಕೂಡಾ ಚಿತ್ರವನ್ನು ನೋಡಿ ಖುಷಿಪಟ್ಟಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್`ನಲ್ಲಿ ಕೆಜಿಎಫ್ ನೋಡಿದ ಶಿವಣ್ಣ ಚಿತ್ರವನ್ನು ಮನಸಾರೆ ಹೊಗಳಿದರು. ಇದು ನಮ್ಮ ಚಿತ್ರರಂಗದ ಅದ್ಧೂರಿ ಸಿನಿಮಾ ಎಂದು ಪ್ರಶಂಸಿಸಿದರು.
ಸಿನಿಮಾ ನೋಡ್ತಾ ಇದ್ರೆ ನಮಗೆಲ್ಲ ಹೆಮ್ಮೆ ಆಗುತ್ತೆ. ಡೈಲಾಗ್‍ಗಳಂತೂ ಅದ್ಧೂರಿಯಾಗಿವೆ. ಸೌಂಡಿಂಗ್ ಕೂಡಾ ಸಖತ್ತಾಗಿದೆ. ಕೆಜಿಎಫ್ ನಮ್ಮ ಸಿನಿಮಾ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ ಎಂದ ಶಿವಣ್ಣ ಯಶ್ ನನ್ನ ತಮ್ಮನಿದ್ದಂತೆ. ಯಶ್ ಮೇಲೆ ನನಗೆ ಸಪರೇಟ್ ಪ್ರೀತಿ ಇದೆ. ಅವರ ಹಾರ್ಡ್ ವರ್ಕಿಂಗ್ ಸೂಪರ್. ಯಶ್‍ನ ನೋಡ್ತಾ ಇದ್ರೆ ನನ್ನ ತಮ್ಮ ನೆನಪಾಗ್ತಾನೆ. ನನ್ನ ತಮ್ಮನೇ ಮುಂದೆ ಬಂದಂತೆ ಅನ್ನಿಸುತ್ತೆ ಎಂದರು ಶಿವಣ್ಣ.
ಪ್ರಶಾಂತ್ ನೀಲ್ ನಿರ್ದೇಶನವನ್ನು ಹೊಗಳಿದ ಶಿವಣ್ಣ ಪ್ರಶಾಂತ್‍ರನ್ನು ಸರಸ್ವತಿ ಪುತ್ರ ಎಂದು ಹೊಗಳಿದರು. ಕೆಜಿಎಫ್ 3 ಬರುತ್ತೋ.. ಇಲ್ವೋ ಗೊತ್ತಿಲ್ಲ. ಪ್ರಶಾಂತ್‍ಗೇ ಕಾಲ್ ಮಾಡಿ ಕೇಳ್ತೇನೆ ಎಂದರು ಶಿವಣ್ಣ.
ನನಗೆ ಚಿತ್ರದಲ್ಲಿ ಎಲ್ಲಕ್ಕಿಂತ ತಾಯಿ ಸೆಂಟಿಮೆಂಟ್ ಸೀನ್ ಇಷ್ಟವಾಯ್ತು ಎನ್ನೋದನ್ನೂ ಮರೆಯಲಿಲ್ಲ ಶಿವಣ್ಣ. ಯಶ್ ಮೇಲೆ ನನಗೊಂಥರಾ ವಿಶೇಷ ಪ್ರೀತಿ. ಯಶ್ ಅವರ ಆರಂಭದ ದಿನಗಳಿಂದಲೂ ನೋಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರೇ ಎತ್ತರಕ್ಕೆ ಬೆಳೆದರೂ ಖುಷಿ. ಯಶ್ ಬೆಳೆದರೆ ಇನ್ನೂ ಒಂಥರಾ ಖುಷಿ ಎಂದರು ಶಿವಣ್ಣ.