` ಡಾಲಿ ಡಿಂಪಲ್ ಮಾನ್ಸೂರ್ ರಾಗ ರಿಲೀಸ್ ಡೇಟ್ ಫಿಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ ಡಿಂಪಲ್ ಮಾನ್ಸೂರ್ ರಾಗ ರಿಲೀಸ್ ಡೇಟ್ ಫಿಕ್ಸ್
Monsoon Raga

ಬಡವ ರಾಸ್ಕಲ್ ನಂತರ ಒಂದು ಕಡೆ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್, ಥಿಯೇಟರ್‍ನ್ನು ಇಡೀ ವರ್ಷ ಆಕ್ರಮಿಸುವ ಸೂಚನೆಗಳಿವೆ. ಡಾಲಿಗೆ ಪೈಪೋಟಿ ಕೊಡುವಂತೆ ಬ್ಯಾಕ್ ಟು ಸಿನಿಮಾಗಳ ಮೂಲಕ ಥಿಯೇಟರಲ್ಲಿ ಕಾಣಿಸಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಅವರಿಬ್ಬರೂ ಜೊತೆಯಾಗಿ ನಟಿಸಿರೋ ಸಿನಿಮಾ ಮಾನ್ಸೂನ್ ರಾಗಕ್ಕೆ ಬಿಡುಗಡೆ ಸಮಯ ಹತ್ತಿರ ಬಂದಿದೆ. ಆಗಸ್ಟ್ 12ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಿಸಿದೆ ಚಿತ್ರತಂಡ.

ಸುಮಾರು 8 ತಿಂಗಳ ಹಿಂದೆ ಚಿತ್ರದ ಒಂದು ಪುಟ್ಟ ಟೀಸರ್ ಬಿಟ್ಟಿತ್ತು ಚಿತ್ರತಂಡ. ಒಂದೇ ಒಂದು ಡೈಲಾಗ್ ಇಲ್ಲದ ಆ ಟೀಸರ್‍ನಲ್ಲಿಯೇ ಹೃದಯ ಮುಟ್ಟುವಂತಾ ಪುಟ್ಟ ಕಥೆ ಹೇಳಿದ್ದರು ನಿರ್ದೇಶಕ ಎಸ್.ರವೀಂದ್ರನಾಥ್. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಅನೂಪ್ ಸಿಳೀನ್ ಅವರ ಸಂಗೀತವೂ ಅಷ್ಟೇ ಗಮನ ಸೆಳೆದಿತ್ತು. ಆ ಮಾನ್ಸೂನ್ ರಾಗದ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಚಿತ್ರತಂಡದ ಎದುರು ಚಿತ್ರದ ಪ್ರಚಾರಕ್ಕೆ ಮುಂದಾಗಲು ಇನ್ನೂ 3 ತಿಂಗಳಿದೆ.

ಇತ್ತ ಡಾಲಿ ನಟಿಸಿರುವ ಕನ್ನಡ ಮತ್ತು ಮಲಯಾಳಂನ 21 ಅವರ್ಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಡೇಟ್ ಘೋಷಿಸಿದೆ. ಶಿವಣ್ಣ ಜೊತೆ ನಟಿಸಿರೋ ಬೈರಾಗಿ, ತಮ್ಮದೇ ನಿರ್ಮಾಣದ ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, ಹೊಯ್ಸಳ, ತೋತಾಪುರಿ, ತೆಲುಗಿನಲ್ಲಿ ಪುಷ್ಪ 2.. ಹೀಗೆ ಡಾಲಿ ಚಿತ್ರಗಳ ಲಿಸ್ಟು ತುಂಬಾ ದೊಡ್ಡದು. ಇತ್ತ ರಚಿತಾ ನಟಿಸಿದ್ದ 4 ಚಿತ್ರಗಳು ಈ ವರ್ಷ ಈಗಾಗಲೇ ರಿಲೀಸ್ ಆಗಿವೆ. 8 ಚಿತ್ರಗಳು ಕ್ಯೂನಲ್ಲಿವೆ.