ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿದ್ದಾಯ್ತು. ದಾಖಲೆಗಳನ್ನು ಮುರಿದದ್ದೂ ಆಯ್ತು.. ಇಲ್ಲ.. ಇನ್ನೂ ಮುರಿಯುತ್ತಿದೆ. ಅಪರೂಪಕ್ಕೊಮ್ಮೆ ಸೃಷ್ಟಿಯಾಗುವ ಇತಿಹಾಸವಿದು. ಈಗ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ನಂ.2 ಸ್ಥಾನಕ್ಕೇರಿದೆ. 400 ಕೋಟಿ ಕ್ಲಬ್ ಸೇರಿರುವ ಕೆಜಿಎಫ್ ಚಾಪ್ಟರ್ 2ಗೆ ಬಾಹುಬಲಿ 2 ನಂತರದ ಸ್ಥಾನವಿದೆ.
ಇದನ್ನು ನೋಡಿದ ಬಹುತೇಕರು ಕೇಳುತ್ತಿರೋ ಪ್ರಶ್ನೆ ಇದು. ಕೆಜಿಎಫ್ 2 ಗಳಿಸಿರೋದು ಈಗ 1130 ಕೋಟಿಗಿಂತ ಹೆಚ್ಚು. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು.
ಬಾಹುಬಲಿ 2 ಗಳಿಕೆ ಸುಮಾರು 1400 ಕೋಟಿ. ಆದರೆ ದಂಗಲ್ 2 ಸಾವಿರ ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಇದೆಯಲ್ಲವೇ.?
ಕೆಜಿಎಫ್ 2 ನಂ.2 ಆಗಿರೋದು ಹಿಂದಿ ಭಾಷೆಯಲ್ಲಿ ಮತ್ತು ಪ್ರಾದೇಶಿಕ ಮಾರ್ಕೆಟ್‍ನಲ್ಲಿ. ಬಾಹುಬಲಿ 2 ಕೂಡಾ ಅಷ್ಟೆ.
ದಂಗಲ್ ಸಿನಿಮಾ ಹಿಂದಿಯಲ್ಲಿ ಹೆಚ್ಚೂ ಕಡಿಮೆ 400 ಕೋಟಿ ಗಳಿಸಿತ್ತು. ಉಳಿದಂತೆ ದಂಗಲ್‍ನ ದೊಡ್ಡ ಮೊತ್ತ ಬಂದಿದ್ದು ಚೀನಾ ಮಾರ್ಕೆಟ್‍ನಲ್ಲಿ. ಮ್ಯಾಂಡರಿನ್ ಭಾಷೆಗೆ ಡಬ್ ಆಗಿ ರಿಲಿಸ್ ಆದ ದಂಗಲ್, ಅಲ್ಲಿ ದೊಡ್ಡ ಮೊತ್ತ ಗಳಿಸಿತ್ತು.
ಸ್ಥಳೀಯ ಅರ್ಥಾತ್ ಇಂಡಿಯನ್ ಮಾರ್ಕೆಟ್ ಬಾಕ್ಸಾಫೀಸ್‍ನಲ್ಲಿ ಈಗಲೂ ಬಾಹುಬಲಿ 2, ನಂ.1 ಸ್ಥಾನದಲ್ಲಿದೆ. ಕೆಜಿಎಫ್ ಚಾಪ್ಟರ್ 2 ನಂ.2 ಸ್ಥಾನಕ್ಕೇರಿದೆ.