ಯೋಗರಾಜ್ ಭಟ್ ನಿರ್ದೇಶನದ ಇನ್ನೇನು ರಿಲೀಸ್ ಆಗಬೇಕಿರುವ ಚಿತ್ರ ಗಾಳಿಪಟ 2. ಮತ್ತೊಮ್ಮೆ ಗಣೇಶ್, ದಿಗಂತ್ ಜೊತೆಗೂಡಿ ನಿರ್ದೇಶಿಸಿರುವ ಸಿನಿಮಾ. ಲೂಸಿಯಾ ಪವನ್‍ರನ್ನು ಈ ಚಿತ್ರದಿಂದ ಹೀರೋ ಮಾಡುತ್ತಿರೋ ಭಟ್ಟರ ಜೊತೆಗೆ ಗಾಳಿಪಟ ಹಾರಿಸೋಕೆ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಇದ್ದಾರೆ. ಇವರೆಲ್ಲರಿಗೂ ಸೀನಿಯರ್ ಗುರುವಾಗಿ ಅನಂತ್ ನಾಗ್ ಇದ್ದಾರೆ. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.
ಇದು ಹೊಸದೇನಲ್ಲ. ವಿಚಿತ್ರವೂ ಅಲ್ಲ. ಭಟ್ಟರ ಸಿನಿಮಾಗಳು ಸಕುಟುಂಬ ಸಮೇತರಾಗಿ ನೋಡುವಂತೆಯೇ ಇರುತ್ತವೆ. ದ್ವಂದ್ವಾರ್ಥ ಇರಲ್ಲ. ಅಶ್ಲೀಲತೆಯೂ ಇರಲ್ಲ. ಎಂದಿನಂತೆ ತಮಾಷೆಯಾಗಿಯೇ ಸೀರಿಯಸ್ ಕಥೆ ಹೇಳುವ ಭಟ್ಟರು ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ? ಅದನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ಹೇಳಬೇಕು.