ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ಶುರುವಾಗುತ್ತಿದೆ. ತಲೈವರ್ 169 ಅನ್ನೋದು ಚಿತ್ರದ ಸದ್ಯದ ಟೈಟಲ್. 169 ಅನ್ನೋದು ರಜನಿ ಚಿತ್ರಗಳ ನಂಬರ್. ಚಿತ್ರವನ್ನು ನಿರ್ದೇಶನ ಮಾಡ್ತಿರೋದು ನೆಲ್ಸನ್. ಇತ್ತೀಚೆಗೆ ರಿಲೀಸ್ ಆದ ಬೀಸ್ಟ್, ಕೊಲಮಾವು ಕೋಕಿಲ, ಡಾಕ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನೆಲ್ಸನ್, ಮುಂದಿನ ಚಿತ್ರದಲ್ಲಿ ರಜನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಆ ಚಿತ್ರದಲ್ಲಿ ಶಿವಣ್ಣ ಅವರಿಗೊಂದು ಪಾತ್ರವಿದೆಯಂತೆ. ಸನ್ ಗ್ರೂಪ್`ನ ಕಲಾನಿಧಿ ಮಾರನ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಟಿಸೋಕೆ ಕೇಳಿಕೊಳ್ಳಲಾಗಿದೆಯಂತೆ. ಚಿತ್ರ ಆಗಸ್ಟ್ನಲ್ಲಿ ಸೆಟ್ಟೇರಲಿದೆ.
ರಾಜ್ ಫ್ಯಾಮಿಲಿ ಜೊತೆಗೆ ರಜನಿಗೆ ಅತ್ಯುತ್ತಮ ಬಾಂಧವ್ಯವಿದೆ. ಹಿಗಾಗಿ ಶಿವಣ್ಣ ಒಪ್ಪಬಹುದು. ಈ ಹಿಂದೆ ತೆಲುಗಿನಲ್ಲಿ ಬಾಲಕೃಷ್ಣ ಅವರ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ಶಿವಣ್ಣ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ನಟಿಸಿಲ್ಲ. ನೆಲ್ಸನ್ ಅವರು ಈ ಚಿತ್ರಕ್ಕಾಗಿ ಖುದ್ದು ಶಿವಣ್ಣ ಅವರನ್ನು ಭೇಟಿ ಮಾಡಲಿದ್ದು, ನಂತರವೇ ತೀರ್ಮಾನ ಹೊರಬೀಳಲಿದೆ.