ರಿಷಬ್ ಶೆಟ್ಟಿ. ಚಿತ್ರರಂಗದಲ್ಲಿ ಮೊದಲ ಗೆಲುವು ಕಂಡ ಬೆನ್ನಲ್ಲೇ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಶುರು ಮಾಡಿದರು. ಅದು ಮುಂದುವರೆಯುತ್ತಲೇ ಇದೆ. ಇದೀಗ ರಿಷಬ್ ಶೆಟ್ಟಿ ಶಿವಮ್ಮ ಅನ್ನೋ ಸಿನಿಮಾದ ಬೆನ್ನಿಗೆ ನಿಂತಿದ್ದಾರೆ. ಆ ಚಿತ್ರವನ್ನು ಪ್ರತಿಷ್ಠಿತ ಕ್ಯಾನೆ ಚಲನಚಿತ್ರೋತ್ಸವಕ್ಕೆ ಕೊಂಡೊಯ್ಯುತ್ತಿದ್ದಾರೆ ರಿಷಬ್ ಶೆಟ್ಟಿ. ಇತ್ತೀಚೆಗೆ ಇದೇ ರೀತಿ ರಿಷಬ್, ಪೆದ್ರೋ ಚಿತ್ರವನ್ನು ಪ್ರಮೋಟ್ ಮಾಡಿದ್ದರು.
ಶಿವಮ್ಮ ಕಡಿಮೆ ಬಜೆಟ್ಟಿನ ಚಿತ್ರ. ರಿಷಬ್ ಶೆಟ್ಟಿಯವರ ವಿಭಿನ್ನ ಪ್ರಯೋಗವಾಗಿದ್ದ ಕಥಾ ಸಂಗಮದಲ್ಲಿ ಲಚ್ಚವ್ವ ಅನ್ನೋ ಸಿನಿಮಾ ನೋಡಿದ್ದೀರಲ್ಲ. ಆ ಸಿನಿಮಾ ನಿರ್ದೇಶಿಸಿದ್ದ ಜೈ ಶಂಕರ್ ಅವರೇ ಈ ಶಿವಮ್ಮ ಚಿತ್ರಕ್ಕೆ ಡೈರೆಕ್ಟರ್.
ಈ ಚಿತ್ರದಲ್ಲಿ ಸೇಲ್ಸ್‍ಮನ್‍ಗಳ ಕಥೆ ಹೇಳಿದ್ದೇನೆ. ಚಿತ್ರದ ಶೂಟಿಂಗ್ ನಡೆದಿರೋದು ನಮ್ಮ ಕೊಪ್ಪಳದಲ್ಲೇ. ಲಚ್ಚವ್ವ ಚಿತ್ರದ ರೀತಿಯಲ್ಲೇ ಇಲ್ಲಿಯೂ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ಇದು ನಾನು ಕಥೆ ಹೇಳೋ ಶೈಲಿ ಎನ್ನುತ್ತಾರೆ ಜೈ.
ಇದು ನಮ್ಮ ನೆಲದ ಮಣ್ಣಿನ ಹೃದಯದ ಕಥೆ ಎನ್ನಿಸಿತು. ಕಮರ್ಷಿಯಲ್ ಚಿತ್ರಗಳನ್ನು ಹೊರತುಪಡಿಸಿ ಇಂತಹ ಚಿತ್ರಗಳ ಬೆನ್ನಿಗೆ ನಿಲ್ಲೋದು ನಮ್ಮ ಕರ್ತವ್ಯ. ಒಬ್ಬ ನಿರ್ಮಾಪಕನಾಗಿ ಇಂತಹ ಔಟ್ ಆಫ್ ಬಾಕ್ಸ್ ಸಿನಿಮಾಗಳನ್ನು ಮಾಡುವ ಕಷ್ಟ ನನಗೆ ಗೊತ್ತಿದೆ. ಅಲ್ಲದೆ ಜೈ ನನಗೆ ಕಥಾ ಸಂಗಮದಿಂದಲೂ ಗೊತ್ತು. ಅವರ ಲಚ್ಚವ್ವಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ.. ಎನ್ನುತ್ತಾರೆ ರಿಷಬ್ ಶೆಟ್ಟಿ.