ಮಾರ್ಚ್ 18ರಂದು ರಿಲೀಸ್ ಆಗಿದ್ದ ಸಿನಿಮಾ ಜೇಮ್ಸ್. ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ. ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕನ್ನಡಿಗರು ಅಪ್ಪು ಇಲ್ಲದ ನೋವಿನಲ್ಲೇ ಚಿತ್ರವನ್ನು ಅಪ್ಪಿಕೊಂಡರು. ಮೊದಲಿಗೆ ಶಿವಣ್ಣ ಧ್ವನಿಯಲ್ಲಿ ರಿಲೀಸ್ ಆಗಿದ್ದ ಸಿನಿಮಾ ಈಗ ಅಪ್ಪು ಅವರ ಧ್ವನಿಯಲ್ಲೇ ನೋಡಲು ಸಿಗುತ್ತಿದೆ. ಸಿನಿಮಾ ಈಗ ಯಶಸ್ವಿ 50 ದಿನ ಪೂರೈಸಿದೆ.
ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದರು. ಚಿತ್ರ ಕನ್ನಡದಲ್ಲಿ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿತ್ತು.