` ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್
ಕೆಜಿಎಫ್ 2 ನೋಡಿದ ಪಾಂಡ್ಯ ಟೀಮ್

ಕೆಜಿಎಫ್ ನಿರ್ಮಾಣ ಸಂಸ್ಥೆ ಹೊಂಬಾಳೆ ಆರ್.ಸಿ.ಬಿ. ಜೊತೆಗೆ ಅಧಿಕೃತ ಒಪ್ಪಂದವನ್ನೇ ಮಾಡಿಕೊಂಡಿದೆ. ಕ್ರೀಡಾ ಸಂಸ್ಥೆಯ ಜೊತೆ ಇಂಥಾದ್ದೊಂದು ಒಪ್ಪಂದ ಹೊಸದು. ಇದರ ಜೊತೆಗೆ ಆರ್.ಸಿ.ಬಿ. ತಂಡದ ಆಟಗಾರರು ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಅತ್ತ, ಕೆಜಿಎಫ್ ತಂಡದವರು ಆರ್.ಸಿ.ಬಿ ಮ್ಯಾಚ್‍ಗಳನ್ನು ನೋಡಿ ಬೆನ್ನು ತಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ತಂಡವೂ ಕೆಜಿಎಫ್ 2 ಸಿನಿಮಾವನ್ನು ನೋಡಿ ಖುಷಿಪಟ್ಟಿದೆ. ಸದ್ಯಕ್ಕೆ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ನಂ.1 ತಂಡವಾಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಕೆಜಿಎಫ್ 2 ಸಿನಿಮಾವನ್ನು ನೋಡಿದೆ.

ಆಟಗಾರರು ಬಯೋಬಬಲ್‍ನಲ್ಲಿರೋ ಕಾರಣ ಐಪಿಎಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡು ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬಯೋಬಬಲ್‍ನಲ್ಲಿರೋ ಆಟಗಾರರು ಹಾಗೂ ಅವರ ಪತ್ನಿಯರು ಒಟ್ಟಿಗೇ ಕೆಜಿಎಫ್ 2 ನೋಡಿ ಖುಷಿಪಟ್ಟಿದ್ದಾರೆ.

ಅತ್ತ ಕೆಜಿಎಫ್ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸುತ್ತಾ ಮುನ್ನುಗ್ಗುತ್ತಿದೆ. ಸದ್ಯಕ್ಕೆ ಕೆಜಿಎಫ್ ದೇಶದ ನಂ.3 ಸಿನಿಮಾ ಆಗಿದೆ, ಲಾಭದ ಲೆಕ್ಕದಲ್ಲಿ.