` ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?
KGF Chapter 2 Movie Image

ಕೆಜಿಎಫ್ ಚಾಪ್ಟರ್ 1ನಲ್ಲಿ ಒಂದು ಡೈಲಾಗ್ ಇದೆ. ಯಾರ್ ಯಾರನ್ನೋ ಹೊಡೆದು ಡಾನ್ ಆದವನಲ್ಲ.. ನಾನು. ನಾನು ಹೊಡೆದವರೆಲ್ಲ ಡಾನ್‍ಗಳೇ.. ಕೆಜಿಎಫ್ 2 ರಿಲೀಸ್ ಆದ ನಂತರ ಆ ಡೈಲಾಗ್ ಮತ್ತೆ ಮತ್ತೆ ನೆನಪಾಗುವಂತೆ ಮಾಡಿದೆ ನಂತರ ರಿಲೀಸ್ ಆದ ಚಿತ್ರಗಳ ಹೀನಾಯ ಸೋಲುಗಳು. ಹಾಗೆ ನೋಡಿದರೆ.. ಹಿನ್ನಡೆ ಅನುಭವಿಸಿಯೂ ಲಾಭ ಮಾಡಿದ್ದು ತಮಿಳಿನ ಬೀಸ್ಟ್ ಮಾತ್ರ.

ಕೆಜಿಎಫ್ 2 ರಿಲೀಸ್ ಆದ 2 ವಾರದ ನಂತರ ರಿಲೀಸ್ ಆಗಿದ್ದು ಹಿಂದಿಯಲ್ಲಿ ಅಜಯ್ ದೇವಗನ್ ಅವರ ರನ್ ವೇ 34. ಆ ಚಿತ್ರ ಮೇ 1ರಂದು ಗಳಿಸಿರೋ ಬಾಕ್ಸಾಫೀಸ್ ಕಲೆಕ್ಷನ್ 7.25 ಕೋಟಿ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್ ಕೂಡಾ ಇದ್ದರು.

ಅದರ ಜೊತೆಯಲ್ಲೇ ರಿಲೀಸ್ ಆದ ಚಿತ್ರ ಹೀರೋಪಂತಿ 2. ಹೀರೋ ಟೈಗರ್ ಶ್ರಾಫ್. ಆ ಚಿತ್ರದ ಮೇ 1ನೇ ತಾರೀಕಿನ ರಿಪೋರ್ಟ್ 4.25 ಕೋಟಿ.

ಇದೇ ವೇಳೆ ಇದೇ ಮೇ 1ರಂದು ಕೆಜಿಎಫ್ 2ನ ಕಲೆಕ್ಷನ್ ರಿಪೋರ್ಟ್ ಹಿಂದಿಯಲ್ಲಿ 11.25 ಕೋಟಿ. ಅಂದ ಹಾಗೆ ಕೆಜಿಎಫ್ 2 ರಿಲೀಸ್ ಆಗಿ ಎರಡು ವಾರವಾಗಿದೆ ಅನ್ನೋದು ನೆನಪಿರಲಿ.

ಇದಕ್ಕೂ ಮೊದಲು ಕೆಜಿಎಫ್ 2 ಎದುರು ಬರಬೇಕಿದ್ದ ಜೆರ್ಸಿ, ಒಂದು ವಾರ ಲೇಟ್ ಆಗಿ ಬಂದರೂ ಬಾಕ್ಸಾಫೀಸಿನಲ್ಲಿ ಡುಮ್ಕಿ ಹೊಡೀತು.

ತೆಲುಗಿನಲ್ಲಿ ಕೆಜಿಎಫ್‍ಗೆ ರಿಲೀಸ್ ಆದ 2 ವಾರದ ನಂತರವೂ ಫೈಟ್ ಕೊಟ್ಟಿದ್ದು ರಾಜಮೌಳಿಯ ಆರ್.ಆರ್.ಆರ್. ತೆಲುಗಿನ ಎರಡೂ ರಾಜ್ಯಗಳಲ್ಲಿ ಈಗಲೂ ಸದ್ಯಕ್ಕೆ ಆರ್.ಆರ್.ಆರ್. ನಂ.1 ಸ್ಥಾನದಲ್ಲೇ ಇದೆ. ಇನ್ನು ಈ ಗ್ಯಾಪಲ್ಲಿ ಬಂದ ತೆಲುಗಿನ ಕೆಲವು ಚಿತ್ರಗಳು ಸೋತವು. 2 ವಾರದ ನಂತರ ಬಂದ ಮೆಗಾಸ್ಟಾರ್ ಆಚಾರ್ಯ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಪೈಪೋಟಿ ಕೊಡುತ್ತಿದೆ.

ತಮಿಳಿನಲ್ಲಿ ಬೀಸ್ಟ್ ಆರಂಭದ ಫೈಟ್‍ನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ. ನಿರ್ದೇಶಕರ ಕನ್‍ಫ್ಯೂಸ್‍ನಿಂದಾಗಿ ಬೀಸ್ಟ್ ಆವರೇಜ್ ಆದರೆ, ಅಲ್ಲಿ ಕೆಜಿಎಫ್ ದಾಖಲೆಯನ್ನೇ ಬರೆಯಿತು.