ಕನ್ನಡದಲ್ಲಿಯೇ 150 ಕೋಟಿ ದಾಟಿರುವ ಕೆಜಿಎಫ್ ಚಾಪ್ಟರ್ 2, ರಿಲೀಸ್ ಆದ ಪ್ರತೀ ರಾಜ್ಯದಲ್ಲೂ.. ಪ್ರತೀ ಭಾಷೆಯಲ್ಲೂ ದಾಖಲೆ ಬರೆಯುತ್ತಿದೆ.
ತೆಲುಗಿನ ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಜಿಎಫ್ ಗಳಿಕೆ 125 ಕೋಟಿಗೂ ಹೆಚ್ಚು. ಅಲ್ಲಿ ಟಿಕೆಟ್ ಬೆಲೆ 250 ರೂ. ಮೀರುವಂತಿಲ್ಲ ಎನ್ನುವುದೂ ನೆನಪಲ್ಲಿರಬೇಕು. ಹಿಂದಿಯಲ್ಲಿ ಈಗಾಗಲೇ 400 ಕೋಟಿ ಗಡಿಯಲ್ಲಿದೆ ಕೆಜಿಎಫ್. ಇನ್ನೂ ವಿಶೇಷವೆಂದರೆ ಹಿಂದಿ ಮತ್ತು ತೆಲುಗಿನಲ್ಲಿ ಕೆಜಿಎಫ್ ನೋಡಿದವರ ಸಂಖ್ಯೆ ಕನ್ನಡದಲ್ಲಿ ನೋಡಿದವರ ಸಂಖ್ಯೆಗಿಂತ ಹೆಚ್ಚು.
ತಮಿಳುನಾಡಿನಲ್ಲಿ 100 ಕೋಟಿ ಗಡಿಯಲ್ಲಿರೋ ಕೆಜಿಎಫ್ ಈ ವಾರಾಂತ್ಯಕ್ಕೆ 100 ಕೋಟಿ ಗಡಿ ದಾಟಬಹುದು. ತಮಿಳಿನ ವಿಜಯ್ ಚಿತ್ರವನ್ನೂ ಮೀರಿಸಿ ಮುನ್ನುಗ್ಗುತ್ತಿರೋ ಕೆಜಿಎಫ್, ತಮಿಳುನಾಡಿನಲ್ಲಿ 100 ಕೋಟಿ ದಾಟುವ ಮೊದಲ ಕರ್ನಾಟಕ ಸಿನಿಮಾ ಎಂಬ ದಾಖಲೆ ಬರೆಯುತ್ತಿದೆ.
ಕೇರಳದಲ್ಲಿ ಕಲೆಕ್ಷನ್ ಈಗಾಗಲೇ 50 ಕೋಟಿ ದಾಟಿದೆ. ಅದೂ ದಾಖಲೆಯೇ. ದೇಶದ ಇತರೆಡೆ ಕಲೆಕ್ಷನ್ 400 ಕೋಟಿಗೂ ಹೆಚ್ಚು. ವಿದೇಶದಲ್ಲಿಯೂ 160 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ.
ಕೆಜಿಎಫ್ ಚಾಪ್ಟರ್ 2.. ಅಧಿಕೃತವಾಗಿಯೇ ಸಾವಿರ ಕೋಟಿ ಬಾರ್ಡರ್‍ನಲ್ಲಿದೆ. ಈ ವಾರಾಂತ್ಯದ ಹೊತ್ತಿಗೆ ಅದು ದಾಟುವ ಎಲ್ಲ ಸಾಧ್ಯತೆಗಳೂ ಇವೆ.