ಕಮಲಿ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್. ವೈಯಾಲಿಕಾವಲ್ ಪೊಲೀಸರು ಅರವಿಂದ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಅರವಿಂದ್ ಕೌಶಿಕ್ ಕಿರುತೆರೆಯಲ್ಲಿ ಕಮಲಿ ಧಾರಾವಾಹಿ ನಿರ್ದೇಶನ ಮಾಡಿದ್ದರಷ್ಟೇ ಅಲ್ಲ, ಹುಲಿರಾಯ, ನಮ್ ಏರಿಯಾಲ್ ಒಂದಿನ, ಶಾರ್ದೂಲ ಎಂಬ ಚಿತ್ರಗಳನ್ನೂ ಡೈರೆಕ್ಟ್ ಮಾಡಿದ್ದಾರೆ. 2018ರಲ್ಲಿ ಕಮಲಿ ಧಾರಾವಾಹಿಗಾಗಿ ಕಥೆ ಸಿದ್ಧಪಡಿಸಿಕೊಂಡಿದ್ದ ಅರವಿಂದ್ ಕೌಶಿಕ್, ನಿರ್ಮಾಪಕ ರೋಹಿತ್ ಅವರಿಂದ 73 ಲಕ್ಷ ಹೂಡಿಕೆ ಮಾಡಿಸಿದ್ದರು. ಆದರೆ ಹಣ ಪಡೆದುಕೊಂಡಿದ್ದ ಕೌಶಿಕ್ ಧಾರಾವಾಹಿ ಟೈಟಲ್ ಕಾರ್ಡ್‍ನಲ್ಲಿ ನಿರ್ಮಾಪಕರ ಹೆಸರಿನ ಜಾಗದಲ್ಲಿ ಹೆಸರೂ ಕೂಡಾ ಹಾಕಿರಲಿಲ್ಲ. 7 ಕೋಟಿಗೂ ಹೆಚ್ಚು ಲಾಭ ಮಾಡಿದರೂ ಒಂದು ಪೈಸೆ ಕೊಡಲಿಲ್ಲ. ಟಿವಿ ಚಾನೆಲ್‍ನವರನ್ನು ಕಾಂಟ್ಯಾಕ್ಟ್ ಮಾಡಿದರೆ ಅವರು ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು ಎನ್ನುವುದು ನಿರ್ಮಾಪಕ ರೋಹಿತ್ ದೂರು.
ಸದ್ಯಕ್ಕೀಗ ಅರವಿಂದ್ ಕೌಶಿಕ್ ಪೊಲೀಸರ ಅತಿಥಿ.