ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್‍ನ ಬಾನದಾರಿಯಲ್ಲಿ.. ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓದಿದ್ದಿರಿ. ಚಿತ್ರದಲ್ಲಿ ಇನ್ನೂ ಒಬ್ಬ ನಾಯಕಿಯಿರೋ ಸಂಗತಿಯೂ ಇತ್ತು. ಈಗ ಆ ಪಾತ್ರಕ್ಕೆ ರೀಷ್ಮಾ ನಾಣಯ್ಯ ಬಂದಿದ್ದಾರೆ.
ಪ್ರೀತಮ್ ಸರ್ ನನಗೆ ಮೊದಲು ಕಥೆ ಹೇಳಿದಾಗ ಥ್ರಿಲ್ ಆದೆ. ಚಿತ್ರದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರ. ಗಣೇಶ್ ಸರ್ ನನ್ನ ಇಷ್ಟದ ನಟ. ಅವರೊಂದಿಗೆ ನಟಿಸೋಕೆ ಥ್ರಿಲ್ ಆಗಿದ್ದೇನೆ ಎಂದಿದ್ದಾರೆ ರೀಷ್ಮಾ ನಾಣಯ್ಯ.
ಏಕ್ ಲವ್ ಯಾ ಮಾಡಬೇಕಾದರೇ ಹಲವು ಅವಕಾಶಗಳು ಬಂದವು. ಏಕ್ ಲವ್ ಯಾ ರಿಯಾಕ್ಷನ್ ನೋಡಿಕೊಂಡೇ ಮುಂದಿನ ಹೆಜ್ಜೆ ಇಡೋಣ ಎಂದು ನಿರ್ಧರಿಸಿದ್ದೆ. ಪ್ರೇಮ್ ಸರ್ ಮತ್ತು ರಕ್ಷಿತಾ ಮ್ಯಾಡಂ ನನಗೆ ನೀಡಿದ ಬೆಂಬಲಕ್ಕೆ ಸದಾ ಋಣಿ ಎಂದಿದ್ದಾರೆ ರೀಷ್ಮಾ ನಾಣಯ್ಯ.