ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.
ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.
ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.