ಜಗ್ಗೇಶ್ ಹೇಳೋ ರೀತಿಯ ಡೈಲಾಗ್ ನಾನು ಹೇಳಿದ್ರೆ ಯಾವೆಲ್ಲ ರೀತಿಯಲ್ಲಿ ಟ್ರೋಲ್ ಆಗಬಹುದು ಅಂತಾ ಯೋಚಿಸ್ತಾ ಇದ್ದೆ. ನಾನು ಜಗ್ಗೇಶ್ ಥರಾ ಡೈಲಾಗ್ ಹೊಡೆದ್ರೂ ನ್ಯೂಸಲ್ಲಿರ್ತೀನಿ. ಯಾರಿಗೂ ಸಪೋರ್ಟ್ ಮಾಡದೇ ಇಲ್ಲದಿದ್ರೂ ನ್ಯೂಸಲ್ಲಿರ್ತೀನಿ..
ಇದು ಸುದೀಪ್ ಆಡಿದ ಮಾತು. ಸ್ಥಳ ತೋತಾಪುರಿ ಭಾಗ 1ರ ಟ್ರೇಲರ್ ಬಿಡುಗಡೆ ಕಾರ್ಯಕ್ರಮ.
ತೋತಾಪುರಿ ಟ್ರೇಲರ್ ರಿಲೀಸ್ ಮಾಡಿದ ಸುದೀಪ್ ಉತ್ತರ ಕೊಟ್ಟಿದ್ದು ಯಾರಿಗೆ? ಇತ್ತೀಚೆಗೆ ಯಾವುದೋ ಹಳೆಯ ವಿಡಿಯೋ ಇಟ್ಟುಕೊಂಡು ವಿವಾದ ಸೃಷ್ಟಿಸಲಾಗಿತ್ತು. ಅದು ಯಶ್ ಫ್ಯಾನ್ಸ್ ವರ್ಸಸ್ ಸುದೀಪ್ ಫ್ಯಾನ್ಸ್ ಲೆವೆಲ್ಲಿಗೆ ಹೋಗಿತ್ತು. ಅದಕ್ಕೆ ಕೊಟ್ಟ ಉತ್ತರವಾ ಇದು?
ಹಾಗಂತ ಸುದೀಪ್ ಯಾರಿಗೂ ಸಪೋರ್ಟ್ ಮಾಡಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಇದೇ ತೋತಾಪುರಿ ಚಿತ್ರದಲ್ಲಿ ನಟಿಸಿರುವ ಡಾಲಿ ಧನಂಜಯ್ ಅವರನ್ನು ಸುದೀಪ್, ಮನಃಪೂರ್ವಕವಾಗಿ ಹೊಗಳಿದರು. ಸುದೀಪ್ ಅವರೇ ಅವಕಾಶ ಕೊಟ್ಟು ಬೆಳೆಸಿದ ಹಲವರು ಇವತ್ತು ಚಿತ್ರರಂಗದಲ್ಲಿದ್ದಾರೆ.
ಕನ್ನಡವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮೊದಲಿಗ ಸುದೀಪ್ ಎಂದು ಜಗ್ಗೇಶ್ ಹೇಳಿದರೆ, ಇದು ಜಗ್ಗೇಶ್ ಸೇರಿದಂತೆ ಹಲವು ಹಿರಿಯರು ಬೆಳೆಸಿರೋ ಚಿತ್ರರಂಗ. ನಾವಿಲ್ಲಿ ಏನೋ ಮಾಡುತ್ತೇವೆ ಎನ್ನುವುದು ನೆಪ ಮಾತ್ರ ಎಂದರು ಸುದೀಪ್.