ಒಂದು ಸಿನಿಮಾ ಎಲ್ಲಿಂದ ಎಲ್ಲಿಗೆ ಹೋಗಬಹುದು.. ಯಾವ ರೇಂಜ್ ತಲುಪಬಹುದು.. ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದೆ ಕೆಜಿಎಫ್. ಜಗತ್ತಿನ ಮೂಲೆ ಮೂಲೆಯಲ್ಲಿರೋ ಇಂಡಿಯನ್ಸ್ ಅಷ್ಟೇ ಅಲ್ಲ.. ಬೇರೆ ಬೇರೆ ದೇಶದ ಜನರೂ ಸಿನಿಮಾ ಇಷ್ಟಪಡುತ್ತಿದ್ದಾರೆ. ಅಲ್ಲೆಲ್ಲ ರಾಕಿಭಾಯ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಪರಿಚಯವಾಗಿದೆ.
ಅದಕ್ಕೆ ಉದಾಹರಣೆ ಇಲ್ಲಿದೆ.
ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಸಿಟಿಯಲ್ಲಿರೋ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್ ಇದ್ಯಲ್ಲ.. ಇದು ಜಗತ್ತಿನಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ 3ನೇ ಅತೀದೊಡ್ಡ ಫುಟ್‍ಬಾಲ್ ಕ್ಲಬ್. ಈ ಟೀಂನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕೂಡಾ ಇದ್ದಾರೆ ಅನ್ನೋದು ಜಸ್ಟ್ ಇನ್‍ಫರ್ಮೇಷನ್.
ಆ ತಂಡವೀಗ ತಂಡದಲ್ಲಿರೋ ಕೆವಿನ್, ಗುಂಡೊಕನ್, ಫೊಡೆನ್ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಟ್ವೀಟ್ ಮಾಡಿದೆ.
ಅತ್ತ ಅಮುಲ್ ಜಾಹೀರಾತಿನಲ್ಲೂ ಯಶ್ ಕ್ಯಾರಿಕೇಚರ್ ಬಳಸಲಾಗಿದೆ. ಆರ್.ಸಿ.ಬಿ. ಜೊತೆ ಅಧಿಕೃತ ಸಹಭಾಗಿತ್ವ ಮಾಡಿಕೊಂಡಿದೆ. ಆರ್‍ಸಿಬಿ ಆಗಲೇ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಫಾಪ್ ಡುಪ್ಲೆಸಿ ಹೆಸರನ್ನು ಸೇರಿಸಿ ಕೆಜಿಎಫ್ ಎಂದು ಈಗಾಗಲೇ ಘೋಷಿಸಿ ಆಗಿದೆ...ಒಟ್ಟಿನಲ್ಲಿ ಕೆಜಿಎಫ್ ಹವಾ ಬಾಕ್ಸಾಫೀಸ್‍ನಲ್ಲಷ್ಟೇ ಅಲ್ಲ.. ಅದರ ವ್ಯಾಪ್ತಿಯನ್ನೂ ಮೀರಿ ಮುನ್ನುಗ್ಗುತ್ತಿದೆ.