ವಿಭಿನ್ನ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರೋ ನಿರ್ದೇಶಕ ಕೆ.ಎಂ. ಚೈತನ್ಯ ಈ ಬಾರಿ ಇನ್ನೊಂದು ಡಿಫರೆಂಟ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಇದುವರೆಗೆ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್, ಸೆಂಟಿಮೆಂಟ್ ಜಾನರ್ ಚಿತ್ರಗಳನ್ನು ನೀಡಿ ಗೆದ್ದಿದ್ದ ಚೈತನ್ಯ ಈ ಬಾರಿ ಸೆಲೆಕ್ಟ್ ಮಾಡಿಕೊಂಡಿರೋದು ಕಾಮಿಡಿ ಚಿತ್ರವನ್ನು. ಚಿತ್ರದ ಹೆಸರೇ ಅಬ್ಬಬ್ಬ.
ಸಿನಿಮಾ ಶುರುವಾದಾಗಿನಿಂತ ಕೊನೆಯವರೆಗೂ ನಗಿಸುತ್ತೆ. ಇದು ಪಕ್ಕಾ ನಗಿಸೋ ಸಿನಿಮಾ. ಡೈಲಾಗ್ಗಳಿಗಿಂತ ಸಿನಿಮಾ ನೋಡುತ್ತಾ ನೋಡುತ್ತಾ.. ಸನ್ನಿವೇಶಗಳೇ ನಗಿಸುತ್ತಾ ಹೋಗುತ್ತವೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಚೈತನ್ಯ.
ಮಲಯಾಳಂನಲ್ಲಿ ಆರ್ಟಿಸ್ಟ್ ಅನ್ನೋ ಚಿತ್ರವನ್ನು ನಿರ್ಮಿಸಿದ್ದ ಆ್ಯನ್ ಅಗಸ್ಟಿನ್, ವಿಜಯ್ ಬಾಬು, ವಿವೇಕ್ ಥಾಮಸ್ ಚಿತ್ರದ ನಿರ್ಮಾಪಕರು. ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರಗಳಲ್ಲಿದ್ದಾರೆ.