` ಶಿವಣ್ಣ-ಪ್ರಭುದೇವ-ಭಟ್ಟರ ಚಿತ್ರಕ್ಕೆ ರಾಕ್`ಲೈನ್ ನಿರ್ಮಾಪಕ : ಟೈಟಲ್ ಏನ್ ಗೊತ್ತಾ? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಶಿವಣ್ಣ-ಪ್ರಭುದೇವ-ಭಟ್ಟರ ಚಿತ್ರಕ್ಕೆ ರಾಕ್`ಲೈನ್ ನಿರ್ಮಾಪಕ : ಟೈಟಲ್ ಏನ್ ಗೊತ್ತಾ?
Prabhudeva, Shivarajkumar, Rockline Venkatesh

ನಾಟ್ಯ ಸಾರ್ವಭೌಮ ಶಿವ ರಾಜಕುಮಾರ್, ಇಂಡಿಯನ್ ಮೈಕೆಲ್ ಜಾಕ್ಸನ್ ಎಂದೇ ಖ್ಯಾತರಾಗಿರೋ ಪ್ರಭುದೇವ, ವಿಭಿನ್ನ ಕಥೆಗಳನ್ನೇ ಹುಡುಕಿ ಹುಡುಕೀ ತಮ್ಮದೇ ಶೈಲಿಯಲ್ಲಿ ಕಥೆ ಹೇಳೋ ಯೋಗರಾಜ ಭಟ್ಟರು, ದೊಡ್ಡ ದೊಡ್ಡ ಚಿತ್ರಗಳಿಗೆ ಶಕ್ತಿ ತುಂಬೋ ರಾಕ್‍ಲೈನ್ ವೆಂಕಟೇಶ್.. ಜೊತೆಯಾಗಿದ್ದಾರೆ. ಈ ದೊಡ್ಡವರ ಕಾಂಬಿನೇನ್‍ನಲ್ಲಿ ಬರುತ್ತಿರೋ ಚಿತ್ರಕ್ಕೆ ಮೇ ತಿಂಗಳಲ್ಲಿ ಮುಹೂರ್ತ ನೆರವೇರಲಿದೆ.

ಅಂದಹಾಗೆ ಈ ಚಿತ್ರಕ್ಕೆ ಸದ್ಯಕ್ಕೆ ಇಟ್ಟಿರೋ ಟೈಟಲ್ ಕುಲದಲ್ಲಿ ಕೀಳ್ಯಾವುದೋ..

ಸತ್ಯ ಹರಿಶ್ಚಂದ್ರ ಚಿತ್ರದ ಈ ಹಾಡು.. ನೃತ್ಯ.. ಆ ಸಿನಿಮಾ ಬಂದು ಹೋಗಿ ಅರ್ಧ ಶತಮಾನವೇ ಕಳೆದಿದ್ದರೂ ಕ್ರೇಜ್ ಕಡಿಮೆಯಾಗಿಲ್ಲ. ಬ್ಲಾಕ್ & ವೈಟ್ ಚಿತ್ರದ ಹಾಡು, ಡಿಜಿಟಲ್ ಯುಗದಲ್ಲೂ ಚರಿಷ್ಮಾ ಉಳಿಸಿಕೊಂಡಿದೆ. ಆ ಹಾಡಿನ ಸಾಲನ್ನು ಟೈಟಲ್ ಆಗಿ ಇಟ್ಟಿರೋದಕ್ಕೂ.. ಚಿತ್ರದ ಕಥೆಗೂ ಸಂಬಂಧ ಇದೆಯಂತೆ. ಏನು ಅನ್ನೋದನ್ನ ಸದ್ಯಕ್ಕೆ ಎಲ್ಲರೂ ಗುಟ್ಟಾಗೇ ಇಟ್ಟಿದ್ದಾರೆ.

ಸ್ವಲ್ಪ ದಿನ ಯಾಕೆ.. ರಾಕ್‍ಲೈನ್ ಸಿನಿಮಾದಲ್ಲಿ ಹೆಚ್ಚು ಆಕ್ಟಿವ್ ಇಲ್ಲ ಎನ್ನುತ್ತಿದ್ದವರಿಗೆ ರಾಕ್‍ಲೈನ್ ಭರ್ಜರಿ ಉತ್ತರ ಕೊಡುತ್ತಿದ್ದಾರೆ. ಕನ್ನಡದಲ್ಲಿ ಈ ಸಿನಿಮಾ, ವಿಸಾರಣೈ ರೀಮೇಕ್ ಮತ್ತೊಂದು ಕಡೆ.. ತೆಲುಗಿನಲ್ಲಿ ವಿಜಯ್ ದೇವರಕೊಂಡ ಸಿನಿಮಾ, ಪುರಿ ಜಗನ್ನಾಥ್ ಸಿನಿಮಾ.. ಹೀಗೆ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ.