ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗುವಂತೆ ಮಾಡಿರೋದು ಕೆಜಿಎಫ್ ಚಾಪ್ಟರ್ 2. ಬಾಕ್ಸಾಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು ಚಿಂದಿ ಉಡಾಯಿಸುತ್ತಿರೋ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ ಯಶ್, ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ಗಳಿಗೆ ನಡುಕ ಹುಟ್ಟಿಸಿರುವುದು ಸತ್ಯ. ಇದು ಯಶ್ ಯಶಸ್ಸಿನ ಸ್ಟೊರಿ.
ಸಕ್ಸಸ್ ಫುಲ್ ಸಿನಿಮಾಗಳಿಂದ ಮತ್ತು ವಿವಾದಗಳಿಂದ.. ಎರಡರಿಂದಲೂ ಖ್ಯಾತವಾಗಿರೋ ನಟಿ ಕಂಗನಾ ರಾವತ್. ಬಾಲಿವುಡ್ ಕ್ವೀನ್. ಬಾಲಿವುಡ್ನ ಬಾದ್ಷಾಗಳಿಗೆ ನೇರಾನೇರ ಸವಾಲು ಹಾಕುವ ಚೆಲುವೆ ಕಂಗನಾ ರಾವತ್. ಅವರೀಗ ಯಶ್ ಅವರಿಗೆ ದೊಡ್ಡ ಸ್ಥಾನವೊಂದನ್ನು ನೀಡಿದ್ದಾರೆ.
ದಶಕಗಳಿಂದ ಭಾರತೀಯ ಚಿತ್ರರಂಗ ಆಂಗ್ರಿ ಯಂಗ್ ಮ್ಯಾನ್‌ನ್ನು ಮಿಸ್ ಮಾಡಿಕೊಂಡಿತ್ತು. 70ರ ದಶಕದ ನಂತರ ಅಮಿತಾಭ್ ಬಚ್ಚನ್ ನಿರ್ವಹಿಸಿ ಬಿಟ್ಟಿದ್ದ ಆಂಗ್ರಿ ಯಂಗ್ ಮ್ಯಾನ್ ಜಾಗವನ್ನು ಯಶ್ ತುಂಬಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ
ಇದು ಕಂಗನಾ ರಾವತ್ ಮಾತು. ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಪಟ್ಟ ಕೊಟ್ಟಿದ್ದ ಚಿತ್ರಗಳು ಡಾನ್, ದೀವಾರ್.. ಮೊದಲಾದ ಅಂಡರ್ವರ್ಡ್ ಸಿನಿಮಾಗಳು. ಯಶ್ ಕೂಡಾ ಅಂತಹುದೇ ಕಥೆಯ ಮೂಲಕ ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಯಶ್ ಅವರನ್ನು ಅಮಿತಾಬ್ ಬಚ್ಚನ್ ಅವರಂತಾ ಲೆಜೆಂಡ್ಗೆ ಈಗಲೇ ಹೋಲಿಸುವುದು ತಪ್ಪು ಎನ್ನುವ ಅಭಿಪ್ರಾಯ ಎಲ್ಲರದ್ದು. ಆದರೆ ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಸಿಕ್ಕಿದ್ದು ಅವರ ಆರಂಭದ ದಿನಗಳಲ್ಲಿ. ತಪ್ಪೇನಿಲ್ಲ ಎನ್ನುವ ಅಭಿಪ್ರಾಯ ಇನ್ನೂ ಕೆಲವರದ್ದು.
ಆದರೆ ಯಶ್ ಅವರಿಗೆ ಕನ್ನಡ ಚಿತ್ರರಂಗದಿಂದಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ದೇಶದ ಎಲ್ಲ ಭಾಷೆಯ ಚಿತ್ರರಂಗದವರಿಂದಲೂ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕಂಗನಾ ರಣಾವತ್ ದೊಡ್ಡ ಮಟ್ಟದ ಹೋಲಿಕೆ ಮಾಡಿದ್ದಾರೆ.. ಅಷ್ಟೆ. ಖುಷಿ ಪಡೋ ಸಮಯವಿದು.