ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ಅತ್ತ ಒಟಿಟಿಯಲ್ಲೂ ರಿಲೀಸ್ ಆಗಿದೆ. ಇತ್ತ ಥಿಯೇಟರಲ್ಲೂ ಯಶಸ್ವಿಯಾಗಿಯೇ ಪ್ರದರ್ಶನವಾಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರೋ ಸಿನಿಮಾ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್, ಸೂಪರ್ ಹಿಟ್ ಎನ್ನುವುದರಲ್ಲಿ ಅನುಮಾನವೇಲ್ಲ.
ಪ್ರೇಕ್ಷಕರ ಸಂಖ್ಯೆ ಮೊದಲ ವಾರಕ್ಕೆ ಹೋಲಿಸಿದರೆ ಬಹಳ ಕಡಿಮೆಯಿದ್ದರೂ, ಒಳ್ಳೆಯ ಷೇರ್ ಬರುತ್ತಿದೆ. ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಸತತ 5ನೇ ವಾರವೂ ಜೇಮ್ಸ್ ಯಶಸ್ವಿಯಾಗಿ 50ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂದುವರೆದಿದೆ.