ಬೀಸ್ಟ್. ತಮಿಳು ಸಿನಿಮಾ. ವಿಜಯ್, ಪೂಜಾ ಹೆಗಡೆ ಅಭಿನಯದ ಸಿನಿಮಾ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುವ ಮುನ್ನಾ ದಿನ ರಿಲೀಸ್ ಆಗಿತ್ತು. ಏಪ್ರಿಲ್ 13ರಂದು ರಿಲೀಸ್ ಆಗಿದ್ದ ಬೀಸ್ಟ್, ಏಪ್ರಿಲ್ 14ರಂದು ಬಹುತೇಕ ಕಡೆ ಕಾಣುತ್ತಿಲ್ಲ. ಕನ್ನಡದ ನಿಷ್ಕರ್ಷ ಚಿತ್ರದ ರೀಮೇಕ್‍ನಂತೆ ಕಾಣುತ್ತಿದೆ ಎಂಬ ಆರೋಪವೂ ಬೀಸ್ಟ್ ಬಗ್ಗೆ ಕೇಳಿ ಬಂದಿತ್ತು. ತಮಿಳುನಾಡಿನಲ್ಲೇ ಕೆಲವೆಡೆ ಅಭಿಮಾನಿಗಳು ಸಿನಿಮಾ ಚೆನ್ನಾಗಿಲ್ಲ ಎಂದು ಸ್ಕ್ರೀನ್‍ಗೆ ಬೆಂಕಿ ಹಚ್ಚಿದ್ದ ಘಟನೆಯೂ ನಡೆದಿತ್ತು. ಆದರೆ, ಮರುದಿನವೇ ಬೀಸ್ಟ್ ಎತ್ತಂಗಡಿಯಾಗಿದೆ.
ಕರ್ನಾಟಕದಲ್ಲಿ.. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕಿಂತ ತಮಿಳು ಚಿತ್ರಗಳು ದೊಡ್ಡ ಬಿಸಿನೆಸ್ ಮಾಡುತ್ತವೆ. ವಿಪರ್ಯಾಸ ಎನ್ನಿಸಿದರೂ ಇದು ಸತ್ಯ. ಹೀಗಿರುವಾಗ ಬೀಸ್ಟ್ ರಿಲೀಸ್ ಆದ ಮರುದಿನವೇ ಎತ್ತಂಗಡಿಯಾಗಿದೆ. ಕಾರಣ ಬೇರೇನಿಲ್ಲ, ಬೀಸ್ಟ್ ಚಿತ್ರಕ್ಕೆ ಬುಕ್ಕಿಂಗ್ ಆಗಿಲ್ಲ. ಕೆಲವು ಕಡೆ ಪ್ರೇಕ್ಷಕರು ಬಂದಿಲ್ಲ.
ಹಾಗೆ ಬೀಸ್ಟ್ ಎಕ್ಸಿಟ್ ಆದ ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನವಾಗುತ್ತಿದೆ.