ಜಾಸ್ತಿ ಸಮಯ ಇಲ್ಲ. ಸುಮಾರು 2 ವರ್ಷ ಕಾಯಿಸಿ ಕಾಯಿಸಿ ಕೊನೆಗೂ ದರ್ಶನ ಕೊಡೋಕೆ ಬರುತ್ತಿದೆ ರಾಕಿಭಾಯ್ ಸಿನಿಮಾ ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ಸೃಷ್ಟಿಯ ಸಿನಿಮಾ ಇದು. ಯಾವ್ದೋ ಒಂದೋ.. ಎರಡೋ ರೆಕಾರ್ಡ್ ಮಾಡಿ ಹಿ ಆಗಿದ್ದಲ್ಲ. ಮಾಡಿದ್ದೆಲ್ಲ ದಾಖಲೆಯೇ ಅನ್ನೋ ಹಾಗೆ ಮುನ್ನುಗ್ಗುತ್ತಿರೋ ಸಿನಿಮಾ ಕೆಜಿಎಫ್. ರಿಲೀಸ್ ಆಗುವ ಕ್ಷಣ ಹತ್ತಿರವಾದಂತೆ.. ಏನೇನೆಲ್ಲ ಆಗ್ತಿದೆ.. ನೋಡಿ.
ಮೊದಲ 4 ದಿನದ ಶೋಗಳು ಹೌಸ್‍ಫುಲ್ ಆಗಿವೆ. ಹೀಗಾಗಿ ಬೆಂಗಳೂರಿನಲ್ಲೇ ಹೊಸದಾಗಿ 25 ಥಿಯೇಟರುಗಳಲ್ಲಿ ಸಿನಿಮಾ ಶೋ ಮಾಡಲಾಗುತ್ತಿದೆ.
ಕೆನಡಾದಲ್ಲಿ ಯಶ್ ಫ್ಯಾನ್ಸ್ ಕಾರ್ ರ್ಯಾಲಿ ಮತ್ತು ಮಾನವ ಸರಪಳಿ ಮಾಡುವ ಮೂಲಕ ಚಿತ್ರವನ್ನು ವೆಲ್‍ಕಂ ಮಾಡಿದ್ದಾರೆ. ಅವರ ಬೆನ್ನ ಹಿಂದೆ ನಿಂತಿರೋದು ಮೈಸೂರು ಸ್ಟುಡಿಯೋ ಹೌಸ್.
ಆಂಧ್ರ, ತೆಲಂಗಾಣದಲ್ಲಿ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲ ಥಿಯೇಟರು, ಮಲ್ಟಿಪ್ಲೆಕ್ಸುಗಳೂ ಹೌಸ್‍ಫುಲ್. ಸೋಲ್ಡ್ ಔಟ್.
ಕೆಜಿಎಫ್ ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಹೊಂಬಾಳೆ ಬ್ಯಾನರ್‍ನ ಕಾಂತಾರಾ ಮತ್ತು ರಾಘವೇಂದ್ರ ಸ್ಟೋರ್ ಚಿತ್ರಗಳ ಟೀಸರುಗಳೂ ಬರುತ್ತಿವೆ. ಕಾಂತಾರಾ ರಿಷಬ್ ಶೆಟ್ಟಿ ಸಿನಿಮಾ ಆದರೆ, ರಾಘವೇಂದ್ರ ಸ್ಟೋರ್ಸ್ ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಸಿನಿಮಾ.
ಇವತ್ತು ಅಂದ್ರೆ ಏಪ್ರಿಲ್ 13ರ ಬೆಳಗ್ಗೆ 11ಕ್ಕೆ ಸುಲ್ತಾನಾ ಸಾಂಗ್ ರಿಲೀಸ್ ಆಗುತ್ತಿದೆ.
ಜಗತ್ತಿನ 75 ದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಉಕ್ರೇನ್‍ನಲ್ಲಿ ಮಾತ್ರ ಇಲ್ಲ. ವಿದೇಶದಲ್ಲಿಯೇ 3000+ ಸ್ಕ್ರೀನ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದು ಸ್ಪೆಷಲ್.
ತಮಿಳುನಾಡಿನಲ್ಲಿ ಕೂಡಾ ಕೆಜಿಎಫ್ ಕ್ರೇಜ್ ಅದ್ಭುತವಾಗಿದೆ. ವಿಜಯ್ ಅಭಿನಯದ ಬೀಸ್ಟ್ ಒಳ್ಳೆಯ ಫೈಟ್ ಕೊಡುತ್ತಿದೆ.
ಮುಂಬೈನಲ್ಲಿ ಯಶ್ ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿದೆ.
ಹಿಂದಿಯಲ್ಲಿ ಕೆಜಿಎಫ್ ಮೊದಲ ದಿನದ ಕಲೆಕ್ಷನ್, ಕೆಜಿಎಫ್ ಚಾಪ್ಟರ್ 1ನ ಒಟ್ಟಾರೆ ಕಲೆಕ್ಷನ್‍ಗಿಂತ ಹೆಚ್ಚಿರಲಿದೆ ಅನ್ನೋದು ನಿರೀಕ್ಷೆ.
ಕೇರಳದಲ್ಲಿ ವೀಕೆಂಡ್‍ನಲ್ಲಿ ಹೆಚ್ಚುವರಿ ಶೋಗಳ ವ್ಯವಸ್ಥೆ ಮಾಡಲಾಗಿದೆ. ಕೇರಳದಲ್ಲಿ ಈ ರೀತಿ ಮಿಡ್ ನೈಟ್ ಶೋ ವ್ಯವಸ್ಥೆ ಮೋಹನ್ ಲಾಲ್ ಮತ್ತು ಮಮ್ಮೂಟಿ ಚಿತ್ರಗಳಿಗೆ ಮಾತ್ರ ಇರುತ್ತಿತ್ತು.