ಇದೊಂದು ಕುತೂಹಲ ಹಾಗೆಯೇ ಇತ್ತು. ಕೆಜಿಎಫ್ ಚಾಪ್ಟರ್ 1 ಯಶಸ್ಸಿನಲ್ಲಿ ದೊಡ್ಡ ಪಾತ್ರ ಸಂಭಾಷಣೆಗಳದ್ದು. ಇವತ್ತಿಗೂ ಆ ಸಂಭಾಷಣೆಗಳು ಆಗಾಗ್ಗೆ ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುತ್ತಲೇ ಇರುತ್ತವೆ. ಆ ಸಂಭಾಷಣೆಗಳ ಸೃಷ್ಟಿಕರ್ತ ಪ್ರಶಾಂತ್ ನೀಲ್. ಆದರೆ ಚಾಪ್ಟರ್ 2ನಲ್ಲಿ ಅದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ.
ಚಿತ್ರದಲ್ಲಿನ ರಾಕಿಭಾಯ್ ಪಾತ್ರಕ್ಕೆ ಸಂಭಾಷಣೆ ಬರೆದಿರುವುದು ಸ್ವತಃ ಯಶ್. ಅವರ ಜೀವನಾನುಭವ ದೊಡ್ಡದು. ಪ್ರತಿದಿನ ಸೆಟ್‍ಗೆ ಬಂದ ಮೇಲೆ ಅವರೇ ಸಂಭಾಷಣೆ ಬರೆಯೋಕೆ ಶುರು ಮಾಡುತ್ತಿದ್ದರು. ಸಂಭಾಷಣೆ ಚೆನ್ನಾಗಿ ಬಂದಿದೆ ಎಂದಿದ್ದಾರೆ ಪ್ರಶಾಂತ್ ನೀಲ್.
ಚಿತ್ರದಲ್ಲಿ ವಯೋಲೆನ್ಸ್ ಲೈಕ್ ಮೀ ಡೈಲಾಗ್ ಫೇಮಸ್ ಆಗಿದೆ. ಅದಕ್ಕೆ ತಕ್ಕಂತೆ ದಾಖಲೆ ಬರೆಯುತ್ತಿರೋ ಹಿನ್ನೆಲೆಯಲ್ಲಿ ರೆಕಾಡ್ರ್ಸ್.. ರೆಕಾಡ್ರ್ಸ್.. ರೆಕಾಡ್ರ್ಸ್.. ರಾಕಿ ಡೋಂಟ್ ಲೈಕ್ ರೆಕಾಡ್ರ್ಸ್.. ಹಿ ಅವಾಯ್ಡ್ ಇಟ್. ಬಟ್ ರೆಕಾಡ್ರ್ಸ್ ಲೈಕ್ಸ್ ರಾಕಿ.. ಎಂಬ ಡೈಲಾಗ್ ಹೊರಬಿದ್ದಿದೆ.